spot_img
Wednesday, January 22, 2025
spot_img

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ

ಮುಂಬಯಿ: ಅರಸಿನ ಕುಂಕುಮಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಹಿಂದೂ ಧರ್ಮದಲ್ಲಿ ಸ್ತ್ರೀಗೆ ಇರುವ ಸ್ಥಾನ ಮಾನದ ಹೆಗ್ಗುರುತು ಹಾಗೂ ಅದನ್ನು ಬಿಂಬಿಸುವ ಉತ್ತಮ ಉದಾಹರಣೆ ಈ ಅರಸಿನ ಕುಂಕುಮ ಕಾರ್ಯಕ್ರಮ. ನಮ್ಮ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಿಮ್ಮೆಲ್ಲರ ಕಾಣಿಕೆ ಅತ್ಯಮೂಲ್ಯ. ನಮ್ಮ ಸಂಸ್ಕಾರ ಸಂಸ್ಕೃತಿಗಳು ಯುವ ಪೀಳಿಗೆಗೆ ಪರಿಚಯಿಸುವ ಮಹತ್ತರವಾದ ಹೊಣೆ ನಮ್ಮ ಮೇಲಿದೆ. ನಮ್ಮ ಸಂಘ ಇನ್ನಷ್ಟು ಬೆಳೆಯಬೇಕು ಇನ್ನು ಹೆಚ್ಚಿನ ಕಾರ್ಯ ಚಟುವಟಿಕೆಗಳು ಕಾರ್ಯಗತಗೊಂಡು ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸಂಘಟನೆಯ ಅಭಿವೃದ್ಧಿಗಾಗಿ ದುಡಿದರೆ ಆಗ ನಮ್ಮದು ಕೂಡ ಒಂದು ಬಲಿಷ್ಠ ಸಂಘಟನೆಯಾಗುತ್ತದೆ ಎಂದು ಉದ್ಯಮಿ ಸಮಾಜಸೇವಕಿ ಯಶೋದಾ ಎನ್. ಪೂಜಾರಿ ಹೇಳಿದರು.

ಅವರು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಮಾರ್ಚ್ ೧೭ ರಂದು ಥಾಣೆ ಪಶ್ಚಿಮದಲ್ಲಿರುವ ಸಂಘದ ಕಿರು ಸಭಾಗೃಹದಲ್ಲಿ ಜರಗಿದ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ ಶುಭ ಹಾರೈಸಿದರು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಲ್ಲವರ ಅಸೋಸಿಯೇಶನ್ ಮಹಿಳಾ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ ಪೂಜಾರಿ ಮಾತನಾಡುತ್ತಾ ಹಳದಿ-ಕುಂಕುಮ ಅದು ನಮ್ಮ ಸೌಭಾಗ್ಯ ಮಹಿಳೆಯರು ಸದಾ ಪಾಲನೆ ಮಾಡಬೇಕು ಹಣೆಗೆ ಸ್ಟಿಕ್ಕರ್ ಹಚ್ಚುವ ಬದಲು ಕುಂಕುಮದ ಬೊಟ್ಟು ಇಡಬೇಕು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ ಸಂಪ್ರದಾಯಗಳು ಮರೆಯಾಗಬಾರದು ಸ್ಟಿಕ್ಕರ್ ಹಚ್ಚುವ ಬದಲು ಕುಂಕುಮದ ಬೊಟ್ಟು ಇಟ್ಟುಕೊಂಡರೆ ಅದರ ಸೌಂದರ್ಯವೇ ಬೇರೆ. ನಾವೆಲ್ಲ ಮಾತೃ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಷ್ಟು ಭಾಷೆ ಬೇಕಾದರೂ ಕಲಿಯಿರಿ ತೊಂದರೆ ಇಲ್ಲ ಆದರೆ ಮಾತೃ ಭಾಷೆ ಮರೆಯದೆ ಅದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಮಾಜಸೇವಕಿ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶಕುಂತಲಾ ಆನಂದ ಪೂಜಾರಿ ಮಾತನಾಡುತ್ತಾ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಪ್ರದಾಯ, ಸಂಸ್ಕಾರ, ಆಚಾರ-ವಿಚಾರಗಳನ್ನು ತಿಳಿಸಿ ಹೇಳಬೇಕು ಒಟ್ಟಿನಲ್ಲಿ ನಮ್ಮ ಸಮುದಾಯ ಬಾಂಧವರು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವಂತಾಗಬೇಕು ಹಾಗೇಯೇ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ತಾವೆಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ಕುಂದಾಪುರ ಬಿಲ್ಲವ ಮಹಿಳೆಯರನ್ನು ಸಂಘಕ್ಕೆ ಪರಿಚಯಿಸುವುದರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಅವರಿಗೆ ಮನವರಿಕೆ ಮಾಡಬೇಕು. ಇಂದು ಸಾಧನಶೀಲ ಮಹಿಳೆಯರ ಸಾಧನೆಗಳನ್ನು ಮೆಲಕು ಹಾಕಿ ಮಹಿಳಾ ದಿನಾಚರಣೆ ಆಚರಿಸುವುದರೊಂದಿಗೆ ಅವರ ಸಾಧನೆಗಳು ನಿಮಗೆಲ್ಲ ಸ್ಫೂರ್ತಿ ಆಗಲಿ ಎಂದು ನುಡಿದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಮಹಿಳಾ ಸಮಿತಿಯ ಮಲ್ಲಿಕಾ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ ಮತ್ತು ನಾಗರತ್ನ ಎನ್. ಪೂಜಾರಿ ಪ್ರಾರ್ಥಿಸಿದರು

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಗಿರಿಜಾ ಚಂದ್ರಶೇಖರ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಧ್ಯಕ್ಷ ಶ್ರೀಧರ ವಿ. ಪೂಜಾರಿ ಉಪಸ್ಥಿತರಿದ್ದರು.

ಸಂಘದ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ಸಮಿತಿಯ ಕಾರ್ಯದರ್ಶಿ ಗಿರಿಜಾ ಬಿ.. ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ ಯುವ ಅಭ್ಯುದಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಜಯಶ್ರೀ ಎ. ಕೋಡಿ ವಿಜೇತರ ಯಾದಿ ವಾಚಿಸಿದರು. ಮಹಿಳಾ ಸಮಿತಿಯ ಜತೆ ಕಾರ್ಯದರ್ಶಿ ಶಾರದಾ ಬಿ. ಪೂಜಾರಿ ವಂದಿಸಿದರು. ಉಪಕಾರ್ಯಾಧ್ಯಕ್ಷೆಯರಾದ ಯಶೋದಾ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ, ಜೊತೆ ಕಾರ್ಯದರ್ಶಿಗಳಾದ ಕುಸುಮ ಎ. ಪೂಜಾರಿ, ಶಾರದಾ ಬಿ. ಪೂಜಾರಿ, ಮಾಜಿ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಸದಸ್ಯರಾದ ಸುಮತಿ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ಸುಶೀಲ ಎಸ್. ಪೂಜಾರಿ, ಗಿರಿಜಾ ಕೆ. ಹೊಕ್ಕೋಳಿ, ವಿಜಯಾ ಎಮ್. ಚಂದನ್, ಕಮಲ ಎಮ್. ಪೂಜಾರಿ ಮತ್ತು ನಾಗರತ್ನ ಎನ್. ಪೂಜಾರಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಯುವ ಅಭ್ಯುದಯ ಸಮಿತಿಯ ಆಯೋಜನೆಯಲ್ಲಿ ಸೂಪರ್ ಮಿನಿಟ್ ಗೇಮ್ಸ್ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!