spot_img
Friday, March 27, 2026
spot_img

ಚುನಾವಣಾ ಬಾಂಡ್‌ : ವಿವರ ಬಹಿರಂಗದಲ್ಲೂ ಸೆಲೆಕ್ಟಿವ್ ಆಗದಿರಿ.. ಎಲ್ಲಾ ಮಾಹಿತಿ ಬೇಕು : ಎಸ್‌ಬಿಐ ಗೆ ಸುಪ್ರೀಂ ಚಾಟಿ !

ಜನಪ್ರತಿನಿಧಿ (ನವದೆಹಲಿ) :  ವಿವರ ಬಹಿರಂಗದಲ್ಲೂ ಸೆಲೆಕ್ಟಿವ್ ಆಗದಿರಿ.. ಎಲ್ಲಾ ಮಾಹಿತಿ ಬೇಕು ಎಂದು ಎಸ್‌ಬಿಐಗೆ ಇಂದು(ಸೋಮವಾರ) ಚಾಟಿ ಬೀಸಿದೆ. ಚುನಾವಣಾ ಬಾಂಡ್ ಮಾಹಿತಿ ಬಹಿರಂಗ ವಿಚಾರವಾಗಿ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ  ಎಸ್‌ಬಿಐಗೆ ಭಾರಿ ಹಿನ್ನಡೆಯಾಗಿದೆ.

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ ಮತ್ತೆ ಹಿನ್ನಡೆಯಾಗಿದ್ದು, ಚುನಾವಣಾ ಬಾಂಡ್‌ಗಳ ಯುನಿಕ್‌ ನಂಬರ್‌ ಸೇರಿ ಎಲ್ಲಾ ಮಾಹಿತಿಯನ್ನೂ ಎಸ್‌ಬಿಐ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಖಡ್‌ ಆದೇಶ ಮಾಡಿದೆ.

ಚುನಾವಣಾ ಬಾಂಡ್ ಗಳ ಕುರಿತು ಎಸ್ ಬಿಐ ಕೆಲ ನಿಯಮಿತ ಮಾಹಿತಿಗಳನ್ನಷ್ಟೇ ಒದಗಿಸಿದೆ. ಆದರೆ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಇರುವ ಅಫಿಡವಿಟ್‌ ಅನ್ನು ಎಸ್‌ಬಿಐ ಕೋರ್ಟ್ ಗೆ ಸಲ್ಲಿಸಬೇಕು. ಆಯ್ಕೆ ಮಾಡಲಾದ ಮಾಹಿತಿಯನ್ನಷ್ಟೇ ನೀಡಿದರೆ ಆಗುವುದಿಲ್ಲ. ಯುನಿಕ್‌ ನಂಬರ್‌ ಸೇರಿ ಸಮಗ್ರ ಮಾಹಿತಿಯನ್ನು ಕೋರ್ಟ್‌ಗೆ ಒದಗಿಸಬೇಕು. ಇದುವರೆಗೆ ಚುನಾವಣೆ ಆಯೋಗಕ್ಕೆ ಎಸ್‌ಬಿಐ ಎರಡು ಪಟ್ಟಿ ನೀಡಿದೆ. ಈಗ ಎಲ್ಲ ಮಾಹಿತಿ ಒದಗಿಸಬೇಕು ಎಂದು ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಯುನಿಕ್‌ ನಂಬರ್ ಎಂದರೇ ಏನು ?

ಚುನಾವಣಾ ಬಾಂಡ್‌ಗಳಿಗೆ ವಿಶೇಷ ಗುರುತಿನ ಸಂಖ್ಯೆಯನ್ನು ಯುನಿಕ್‌ ನಂಬರ್‌ ಎಂದು ಹೇಳಲಾಗುತ್ತದೆ. ಈ ಯುನಿಕ್‌ ನಂಬರ್‌ನಿಂದ ಬಾಂಡ್‌ ಖರೀದಿಸಿದ ದೇಣಿಗೆದಾರರು, ಅವರು ನೀಡಿದ ಮೊತ್ತ ಹಾಗೂ ರಾಜಕೀಯ ಪಕ್ಷಗಳು ಸ್ವೀಕರಿಸಿದ ಹಣದ ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ. ಇದೇ ಕಾರಣಕ್ಕಾಗಿಯೇ ಎಸ್‌ಬಿಐಗೆ ಯುನಿಕ್‌ ನಂಬರ್‌ ಸೇರಿ ಎಲ್ಲ ಮಾಹಿತಿ ಒದಗಿಸಬೇಕು ಸುಪ್ರೀಂ ಕೋರ್ಟ್‌ ಅದೇಶಿಸಿದೆ ಎಂದು ತಜ್ಞರು ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!