Sunday, September 8, 2024

ತಾಯಂದಿರೇ, ಸಹೋದರಿಯರೇ, ನಾನು ನಿಮ್ಮನ್ನು ʼಶಕ್ತಿʼ ಎಂದು ಪೂಜಿಸುತ್ತೇನೆ, ನಾನು ಭಾರತ ಮಾತೆಯ ʼಪೂಜಾರಿʼ : ನರೇಂದ್ರ ಮೋದಿ

ಜನಪ್ರತಿನಿಧಿ (ತೆಲಂಗಾಣ) :  ನನಗೆ ಪ್ರತಿ ತಾಯಿ ಹಾಗೂ ಪ್ರತರಿ ಮಗಳು ʼಶಕ್ತಿʼಯ ಸ್ವರೂಪ. ಅವರನ್ನು ಆರಾಧಿಸುತ್ತೇನೆ. ಇದು ʼಶಕ್ತಿʼಯನ್ನು ನಾಶ ಮಾಡಲು ಹೊರಟಿರುವವರು ಹಾಗೂ ಅವರನ್ನು ಆರಾಧಿಸುವವರ ನಡುವಿನ ಹೋರಾಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಇಂದು(ಸೋಮವಾರ) ಮಾತನಾಡಿದರು. ʼಚಂದ್ರಯಾನʼ ಯಶಸ್ಸನ್ನು ʼಶಿವಶಕ್ತಿʼಗೆ ದೇಶ ಅರ್ಪಿಸಿದೆ. ಇಂತಹ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ʼಶಕ್ತಿʼಯನ್ನು ನಾಶಪಡಿಸುವ ಬಗ್ಗೆ ಮಾತಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ʼಇಂಡಿಯಾʼ ಮೈತ್ರಿಕೂಟದ ರ್ಯಾಲಿಯಲ್ಲಿ ನಮ್ಮ ಹೋರಾಟವು ʼಶಕ್ತಿʼಯ ವಿರುದ್ಧವಾಗಿದೆ ಎಂದು ಹೇಳಿದ್ದರು. ಆದರೇ, ಭಾರತದ ಪ್ರತಿ ಹೆಣ್ಣು ಮಗಳು ʼಶಕ್ತಿʼಯ ಸ್ವರೂಪ. ತಾಯಂದಿರೇ ಮತ್ತು ಸಹೋದರಿಯರೇ, ನಾನು ನಿಮ್ಮನ್ನು ʼಶಕ್ತಿʼ ಎಂದು ಪೂಜಿಸುತ್ತೇನೆ, ನಾನು ಭಾರತ ಮಾತೆಯ ʼಪೂಜಾರಿʼ ಎಂದು ಮೋದಿ ವಿಪಕ್ಷಗಳ ಒಕ್ಕೂಟಕ್ಕೆ ತಿರುಗೇಟು ನೀಡಿದ್ದಾರೆ.

ನಾನು ʼಇಂಡಿಯಾʼ ಮೈತ್ರಿ ಕೂಟದ ಸವಾಲನ್ನು ಸ್ವೀಕರಿಸುತ್ತೇನೆ. ತಾಯಂದರ  ಹಾಗೂ ನನ್ನ ಸಹೋದರಿಯರ ಭದ್ರತೆಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಜನರ ಬೆಂಬಲ ನಿರಂತರವಾಗಿ ಬೆಳೆಯುತ್ತಿದೆ. ಮತದಾನದ ದಿನ ತೆಲಂಗಾಣದಲ್ಲಿ ಬಿಜೆಪಿ ಅಲೆ ಇರಲಿದೆ. ಕಾಂಗ್ರೆಸ್‌ ಹಗಾಗೂ ಬಿಆರ್‌ಎಸ್‌ ತೊಳೆದುಹೋಗುತ್ತವೆ ಎಂದು ಅವರು ಹೇಳಿದ್ದಾರೆ.

ಮಾತ್ರವಲ್ಲದೇ, ತೆಲಂಗಾಣವನ್ನು ಕಾಂಗ್ರೆಸ್‌ ʼಎಟಿಎಂ ರಾಜ್ಯʼವನ್ನಾಗಿ ಮಾಡಿಕೊಂಡಿದ್ದು, ಲೂಟಿ ಮಾಡಿದ ಹಣ ಇಲ್ಲಿಂದ ದೆಹಲಿಗೆ ಹೊಗುತ್ತದೆ ಎಂದು ಪ್ರಧಾನಿ ಕಟುವಾಗಿ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!