spot_img
Friday, March 27, 2026
spot_img

ಲೋಕಸಭಾ ಚುನಾವಣೆ : ರೈತರಿಗೆ ಕಾಂಗ್ರೆಸ್‌ ಪಂಚ ಗ್ಯಾರಂಟಿ ಯೋಜನೆಗಳು, ಮಾಹಿತಿ ಇಲ್ಲಿವೆ !

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆಯ ಸಿದ್ಧತೆ ಚುರುಕಿನಿಂದ ಸಾಗುತ್ತಿದ್ದು, ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಜನರನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಮೇಲಿಂದ ಮೇಲೆ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡುತ್ತಿದ್ದು,  “ಯುವ ನ್ಯಾಯ’, “ನಾರಿ ನ್ಯಾಯ’ದ ಬಳಿಕ ಈಗ ಕಾಂಗ್ರೆಸ್‌ ರೈತರ ಓಲೈಕೆಗೆ ಮುಂದಾಗಿದೆ. ಅದಕ್ಕಾಗಿ “ರೈತ ನ್ಯಾಯ’ದ ಹೆಸರಿನಲ್ಲಿ “ಐದು ಗ್ಯಾರಂಟಿ’ ಗಳನ್ನು ಪ್ರಕಟಿಸಿದೆ. ಈ ಪೈಕಿ ಅಗತ್ಯವಿರುವ ಕೃಷಿ ಸಾಲಮನ್ನಾ ಮೊತ್ತವನ್ನು ನಿರ್ಧರಿಸುವುದಕ್ಕಾಗಿ “ಕೃಷಿ ಸಾಲ ಮನ್ನಾ ಆಯೋಗ’ ಸೃಷ್ಟಿ ಮತ್ತು “ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಮಾನ್ಯತೆ’ ನೀಡುವುದು ಕಾಂಗ್ರೆಸ್ ಪಕ್ಷದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.

ರೈತರ ಎಲ್ಲಾ ಸಮಸ್ಯೆಗಳನ್ನು ಬುಡ ಸಮೇತ ಕಿತ್ತೆಗೆಯುವ 5 ಗ್ಯಾರಂಟಿಗಳನ್ನು ಕಾಂಗ್ರೆಸ್‌ ನೀಡಲಿದೆ. ಉಳುಮೆ ಮಾಡುವ ರೈತರ ಬದುಕನ್ನು ಸಂತೋಷಗೊಳಿಸುವ ಗುರಿಯನ್ನು ಕಾಂಗ್ರೆಸ್‌ ಹಾಕಿಕೊಂಡಿದೆ. ಐತಿಹಾಸಿಕ ಈ ಐದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿದ್ದಾರೆ.

ರೈತ ನ್ಯಾಯದ 5 ಗ್ಯಾರಂಟಿಗಳು :

1.ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ

ಸ್ವಾಮಿನಾಥನ್‌ ಶಿಫಾರಸುಗಳ ಅನ್ವಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಮಾನ್ಯತೆ.

2.ಕೃಷಿ ಸಾಲ ಮನ್ನಾ ಆಯೋಗ

ರೈತರ ಸಾಲ ಮನ್ನಾ ಮತ್ತು ಮನ್ನಾ ಮೊತ್ತವನ್ನು ನಿರ್ಧ ರಿಸುವುದಕ್ಕಾಗಿ ಕೃಷಿ ಸಾಲಮನ್ನಾ ಶಾಶ್ವತ ಆಯೋಗ ರಚನೆ.

3.ವಿಮಾ ಗ್ಯಾರಂಟಿ

ಬೆಳೆ ನಾಶವಾದ ಸಂದರ್ಭದಲ್ಲಿ 30 ದಿನದೊಳಗೇ ರೈತರ ಖಾತೆಗಳಿಗೆ ನೇರವಾಗಿ ಹಣ. ಈ ಸಂಬಂಧ ವಿಮಾ ಯೋಜನೆ ಮರುವಿನ್ಯಾಸ.

4.ಹೊಸ ಆಮದು-ರಫ್ತು ನೀತಿ

ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಆಮದು-ರಫ್ತು ನೀತಿ ಜಾರಿ.

5.ಜಿಎಸ್‌ಟಿ ಮುಕ್ತ ರೈತ

ಕೃಷಿ ಉತ್ಪನ್ನಗಳನ್ನು ಜಿಎಸ್‌ಟಿ ಯಿಂದ ಹೊರಗಿಡಲು ಜಿಎಸ್‌ಟಿಗೆ ತಿದ್ದುಪಡಿಯ ಗ್ಯಾರಂಟಿ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!