Thursday, October 31, 2024

ಲೋಕಸಭಾ ಚುನಾವಣೆ : ಮಹಿಳೆಯರಿಗೆ ಕಾಂಗ್ರೆಸ್‌ ʼನಾರಿ ನ್ಯಾಯ ಗ್ಯಾರಂಟಿʼ | 5 ಗ್ಯಾರಂಟಿಗಳ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

ಜನಪ್ರತಿನಿಧಿ (ನವ ದೆಹಲಿ) : ಕಾಂಗ್ರೆಸ್ ಪಕ್ಷವು ಮಹಿಳಾ ನ್ಯಾಯ ಗ್ಯಾರಂಟಿ ಅಡಿಯಲ್ಲಿ 5 ಘೋಷಣೆಗಳನ್ನು ಮಾಡಿದೆ. ಇವುಗಳಲ್ಲಿ ಮಹಾಲಕ್ಷ್ಮಿ ಗ್ಯಾರಂಟಿ, ಅರ್ಧದಷ್ಟು ಜನಸಂಖ್ಯೆ- ಪೂರ್ಣ ಹಕ್ಕು, ಶಕ್ತಿ ಕಾ ಸಮ್ಮಾನ್, ಅಧಿಕಾರ ಮೈತ್ರಿ ಮತ್ತು ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ ಸೇರಿವೆ.

5 ಗ್ಯಾರಂಟಿಗಳ ವಿಶೇಷತೆಗಳೇನು?

ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಐದು ಗ್ಯಾರಂಟಿ ಘೋಷಣೆಗಳನ್ನು ಮಾಡಿದೆ. ಅದರಲ್ಲಿ ಆರ್ಥಿಕ ಸಹಾಯದಿಂದ ಹಿಡಿದು ಉದ್ಯೋಗದವರೆಗೆ ಭರವಸೆ ನೀಡಲಾಗಿದೆ. ಪ್ರತಿ ಯೋಜನೆಯಡಿ ಮಹಿಳೆಯರಿಗೆ ಏನು ಭರವಸೆ ನೀಡಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ದೇಶದ ಮಹಿಳೆಯರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡುತ್ತಿದೆ.

ಮಹಾಲಕ್ಷ್ಮಿ – ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ ₹ 1 ಲಕ್ಷ.

ಅರ್ಧದಷ್ಟು ಜನಸಂಖ್ಯೆಗೆ ಸಂಪೂರ್ಣ ಹಕ್ಕು: ಕೇಂದ್ರ ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲು.

ಶಕ್ತಿಗೆ ಗೌರವ: ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ದುಪ್ಪಟ್ಟು.

ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್.

ಅಧಿಕಾರ ಮೈತ್ರಿ – ಎಲ್ಲಾ ಪಂಚಾಯತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅವರು ಈ ಹಕ್ಕುಗಳನ್ನು ಪಡೆಯಲು ಸಹಾಯ.

ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಸಮಾನ ಪ್ರಾತಿನಿಧ್ಯವನ್ನು ಒದಗಿಸುವುದು ಕಾಂಗ್ರೆಸ್‌ನ ಗುರಿಯಾಗಿದೆ. ಈ 5 ಐತಿಹಾಸಿಕ ಹೆಜ್ಜೆಗಳು ಮಹಿಳೆಯರಿಗೆ ‘ಸಮೃದ್ಧಿಯ ಬಾಗಿಲು’ ತೆರೆಯಲಿವೆ ಎಂದು ಕಾಂಗ್ರೆಸ್‌ ಭರವಸೆ ನೀಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!