spot_img
Monday, March 16, 2026
spot_img

ನಾವುಂದ: ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಕೆ. ರಾಘವನ್ ನಂಬಿಯಾರ್ ನಿಧನ

ಮರವಂತೆ: ನಾವುಂದದ ಪ್ರಸಿದ್ಧ ಆಯುರ್ವೇದ ವೈದ್ಯ, ಶತಾಯುಷಿ ಡಾ. ಕೆ. ರಾಘವನ್ ನಂಬಿಯಾರ್ (100) ಬುಧವಾರ ತಮ್ಮ ಮನೆಯಲ್ಲಿ ನಿಧನರಾದರು. ಅವರು ನಾವುಂದದಲ್ಲಿ ವೈದ್ಯರಾಗಿರುವ ಪುತ್ರ ಕೆ. ವಾಸುದೇವನ್ ನಂಬಿಯಾರ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಬಾರ್ಕೂರಿನ ಖ್ಯಾತ ವೈದ್ಯ ಕೆ. ಟಿ. ಎನ್. ರಾಮನ್ ನಂಬಿಯಾರರ ಪುತ್ರ ಆಗಿರುವ ರಾಘವನ್ ನವದೆಹಲಿಯ ಅಖಿಲ ಭಾರತ ಆಯುರ್ವೇದ ಮಹಾವಿದ್ಯಾಪೀಠದಿಂದ ಆಯುರ್ವೇದ ವಿಶಾರದ ಪದವಿ ಪಡೆದವರು. ತಮ್ಮ ೨೦ನೆ ವಯಸ್ಸಿನಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ನಾವುಂದದಲ್ಲಿ ವೈದ್ಯ ವೃತ್ತಿ ಆರಂಭಿಸಿ 95ನೆ ವಯಸ್ಸಿನ ವರೆಗೂ ಸುತ್ತಲಿನ ಹಳ್ಳಿಗರಿಗೆ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸಿ ಜನಾನುರಾಗ ಗಳಿಸಿದರು. ಅನ್ಯ ವೈದ್ಯಕೀಯ ಪದ್ಧತಿಯಲ್ಲಿ ಗುಣವಾಗದ ಹಲವು ಕಾಯಿಲೆಗಳಿಗೆ ಶೋಧನ ಮತ್ತು ಶಮನ ವಿಧಾನದಿಂದ ಪರಿಣಾಮಕಾರಿ ಆಯುರ್ವೇದೀಯ ಚಿಕಿತ್ಸೆ ನೀಡುತ್ತಿದ್ದ ಅವರಿಂದ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದಲೂ ಜನರು ಬರುತ್ತಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!