Sunday, September 8, 2024

ಉತ್ತರಾಖಂಡ : ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಜನಪ್ರತಿನಿಧಿ (ಡೆಹ್ರಾಡೂನ್‌) :  ಉತ್ತರಾಖಂಡ ರಾಜ್ಯದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುಮರ್ಮು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಉತ್ತರಾಖಂಡ ರಾಜ್ಯ ಸರ್ಕಾರ ಅಂಗೀಕಾರ ಮಾಡಿರುವ ಮಸೂದೆಯನ್ನು ರಾಜ್ಯಪಾಲ ಗುರ್ಮಿತ್‌ ಸಿಂಗ್‌ ಫೆಬ್ರವರಿ ೨೯ರಂದು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದರು. ಇದೀಗ ಸ್ವಾತಂತ್ರ್ಯಾನಂತರ ಯುಸಿಸಿ ಕಾಯ್ದೆ ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.

ರಾಜ್ಯದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಉತ್ತರಾಖಂಡ ಸರ್ಕಾರವು ಫೆಬ್ರವಚರಿ ೬ರಂದು ವಿಶೇಷ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿತ್ತು. ಮಸೂದೆ ಅಂಗೀಕಾರವು ಉತ್ತರಾಖಂಡ ರಾಜ್ಯದಲ್ಲಿ ಇತಿಹಾಸವಾಗಲಿದೆ ಎಂದು ಧಾಮಿ ಹೇಳಿದ್ದರು. ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಿತ್ತು.

೨೦೨೨ರ ವಿಧಾನಸಭಾ ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆಯನ್ನು ಈ ಕಾಯ್ದೆ ಪೂರ್ಣಗೊಳಿಸಲಿದೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಇದು ಉತ್ತರಾಖಂಡದ ಚಿಕ್ಕ ಕೊಡುಗೆ ಎಂದು ಸಿಎಂ ಹೇಳಿದ್ದರು.

ಈ ಮೂಲಕ ಎಲ್ಲಾ ಧರ್ಮಗಳ ಮಹಿಳೆಯರು, ಪುರುಷರಿಗೆ ಏಕರೂಪದ ಕಾನೂನು ಅನ್ವಯವಾಗಲಿದೆ. ತಾರತಮ್ಯರಹಿತ, ಏಕತೆಯ ಸಮಾಜ ನಿರ್ಮಾಣಕ್ಕೆ ಅನುಖುಲವಾಗಲಿದೆ ಎಂದೂ ಅವರು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!