spot_img
Thursday, May 14, 2026
spot_img

ಕುಂದಾಪುರ ಚಿಕ್ಕನಸಾಲ್ ರಸ್ತೆ ಸಂಗಮ್ ಸಮೀಪ 10 ಅಡಿ ಉದ್ದದ ಹೆಬ್ಬಾವು ಪತ್ತೆ

ಕುಂದಾಪುರ: ಚಿಕ್ಕನಸಾಲ್ ರಸ್ತೆಯ ಸಂಗಮ್ ಸಮೀಪ ಕೋಸ್ತಾ ಕಾಂಪ್ಲೆಕ್ಸ್ ಹಿಂದಿನ ಒಣಿಯಲ್ಲಿ ಮಾ.12ರ ಬೆಳಿಗ್ಗೆ 10 ಅಡಿ ಉದ್ದದ ಹೆಬ್ಬಾವು ಕಂಡು ಬಂತು. ಮಳೆ ನೀರಿನ ತೋಡನ್ನು ಸರಿಪಡಿಸುವ ಕಾರ್ಯ ನಡೆದಿದ್ದು ಕೆಲ ಗಂಟೆಗಳ ನಂತರ ಈ ಹೆಬ್ಬಾವು ಕಂಡು ಬಂತು.

ಈ ವಿಷಯವನ್ನು ಇಲ್ಲಿನ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿ, ಬೀಟ್ ಫಾರೆಸ್ಟ್ ಗಾರ್ಡ್ ರಂಜಿತ್ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಚರಣೆ ಆರಂಭಿಸಿದರು. ಗಾರ್ಡ್ ರಂಜಿತ್ ಜೊತೆ ಹಲವಾರು ಯುವಕರು ಸೇರಿ ಹೆಬ್ಬಾವನ್ನು ಸೆರೆ ಹಿಡಿಯುವ ಕಾರ್ಯಚರಣೆ ಸುಮಾರು ಒಂದು ಗಂಟೆಗೂ ಹೆಚ್ಚಿನ ಪ್ರಯತ್ನದ ನಂತರ ಹೆಬ್ಬಾವನ್ನು ಸೆರೆ ಹಿಡಿಯಲು ಯಶಸ್ವಿಯಾದರು.

ಬೀಟ್ ಫಾರೆಸ್ಟ್ ಗಾರ್ಡ್ ರಂಜೀತ್ ನಿನ್ನೆಯೆ ಕುಂದಾಪುರದ ಸೇವೆ ಕೊನೆ ದಿವಸವಾಗಿದ್ದು, ಬೈಂದೂರಿಗೆ ವರ್ಗಾವಣೆಯಾಗಿದ್ದು, ಕೊನೆ ಗಳಿಗೆಯಲ್ಲಿ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಈ ಹೆಬ್ಬಾವನ್ನು ಸೆರೆ ಹಿಡಿಯಲು ಪ್ರವೀಣ್ ಡಿಮೆಲ್ಲೊ, ಮೆಕ್ವಿಲ್ ಡಿಸೋಜಾ, ಅಂತೋನಿ ಡಿಸೋಜಾ, ಬಾಜಿಲ್ ಡಿಸೋಜಾ, ಗಣೇಶ, ರಿಚ್ಚಾ, ಹನುಮಂತ, ಸೋಮು, ವಿಲ್ಸನ್ ಇನ್ನಿತರರು ಸಹಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!