Thursday, October 31, 2024

ಸಿಎಎ ಜಾರಿಯಾಗಿರುವುದು ಮುಸ್ಲೀಮರ ಪೌರತ್ವ ಕಸಿಯಲು ಅಲ್ಲ, ಆತಂಕ ಪಡುವ ಅಗತ್ಯವಿಲ್ಲ : ದೆಹಲಿ ಹಜ್ ಸಮಿತಿ ಅಧ್ಯಕ್ಷೆ ಕೌಸರ್

ಜನಪ್ರತಿನಿಧಿ (ನವ ದೆಹಲಿ) : ‘ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು.. ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ’ ಎಂದು ನಾಗರೀಕ ಪೌರತ್ವ ಕಾಯ್ದೆ ಸಿಎಎ ಜಾರಿಯನ್ನು ದೆಹಲಿ ಹಜ್ ಸಮಿತಿ ಅಧ್ಯಕ್ಷೆ ಕೌಸರ್ ಜಹಾನ್ ಸ್ವಾಗತಿಸಿದ್ದಾರೆ.

ಸಿಎಎ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವುದರ ನಡುವೆ ದೆಹಲಿ ಹಜ್ ಸಮಿತಿಯ ಅಧ್ಯಕ್ಷೆ ಕೌಸರ್ ಜಹಾನ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ.

 ಕೇಂದ್ರ ಗೃಹ ಸಚಿನ ಅಮಿತ್ ಶಾ ಸಿಎಎ ಜಾರಿ ಕುರಿತು ಘೋಷಣೆ ಮಾಡುತ್ತಲೇ ದೇಶದ ಮುಸ್ಲಿಮರಲ್ಲಿ ಆತಂಕ ಆರಂಭವಾಗಿದೆ, ಆದರೆ ಆತಂಕಕ್ಕೆ ಯಾವುದೇ ಕಾರಣಗಳಿಲ್ಲ. ದೇಶದ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ. ಸಿಎಎ ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ತೆ ಎಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.

ಈ ಕಾನೂನು ಪೌರತ್ವವನ್ನು ನೀಡಲು, ಅದನ್ನು ಕಸಿದುಕೊಳ್ಳಲು ಅಲ್ಲ. ನಾನು ಈ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಇದು ಪೌರತ್ವ ನೀಡಲು ಮಾಡಿರುವ ಕಾನೂನಾಗಿದ್ದು, ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಸ್ಥಿತಿ ಚೆನ್ನಾಗಿಲ್ಲ, ಅವರಿಗೆ ಗೌರವಯುತ ಜೀವನ ನೀಡಲು ಸರ್ಕಾರ ಬಯಸಿದರೆ, ಆಗ ಏನು ಮಾಡಬೇಕು? ಇದಕ್ಕಾಗಿ ಪರಿಹಾರ ಮಾಡಬೇಕಾಗಿದೆ. ಆ ಪರಿಹಾರವೇ ಸಿಎಎ ಜಾರಿಯಾಗಿದೆ, ಇದರಿಂದ ಏನಾದರೂ ಸಮಸ್ಯೆ ಇದೆಯೇ? ಇದರಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಗಾಬರಿ ಪಡುವ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!