spot_img
Friday, January 17, 2025
spot_img

“ಬೆವರು” ಶ್ರಮಸಂಸ್ಕೃತಿಯ ಪ್ರತೀಕ-ಮಹಾಂತೇಶ್

ಕುಂದಾಪುರ ಕಟ್ಟಡ ಕಾರ್ಮಿಕರ ಸ್ವಂತ ಕಚೇರಿ ಉದ್ಘಾಟನೆ

 ಕುಂದಾಪುರ:  ದುಡಿಮೆಯು ಮನುಷ್ಯನನ್ನು ನಿಸ್ವಾರ್ಥಿಯನ್ನಾಗಿ ಮಾಡುತ್ತದೆ  ಬೆವರು ಎಂದರೆ ಅದು ಶ್ರಮಸಂಸ್ಕೃತಿಯ ಪ್ರತೀಕ ಹೀಗಾಗಿ ಬೆವರು ಅತ್ಯಂತ ಶ್ರೇಷ್ಠ ವಾದುದು ಆದರೆ  ಬೆವರನ್ನು ನಿಕೃಷ್ಟವಾಗಿ ನೋಡುವ  ಮನಸ್ಥಿಯಿಂದ ನಮ್ಮ ಸಮಾಜ ಹೊರಗೆ ಬರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಫೆಡರೇಷನ್ (ಸಿ‌ಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹೇಳಿದರು.

   ಅವರು ಇಂದು  ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸ್ವಂತ ಕಚೇರಿ "ಬೆವರು"  ಉದ್ಘಾಟಿಸಿ ಮಾತನಾಡಿದರು.

  ಬೆವರಿನ ಮಹತ್ವವನ್ನು ಅರಿತಿದ್ದ ಮಹಮ್ಮದ್ ಪೈಗಂಬರ್ ಕಾರ್ಮಿಕನ ಬೆವರು ಆರಿಹೋಗುವ ಮುನ್ನ ಅವರ ಕೂಲಿಯನ್ನು ನೀಡಬೇಕು ಎಂದು ಪ್ರತಿಪಾದಿಸಿದ್ದರು. ಸುಮಾರು ೪ ಸಾವಿರ ಮಂದಿ ನಿರ್ಮಾಣ ಕಾರ್ಮಿಕರು ತಮ್ಮ ಬೆವರು ಹಾಗೂ ಶ್ರಮದಿಂದ ಕಟ್ಟಿರುವ ಈ ಕಾರ್ಮಿಕ ಕಚೇರಿಯು ಭವಿಷ್ಯದಲ್ಲಿ ಕಾರ್ಮಿಕರ ವರ್ಗದ ಅರಿವು ಹಾಗೂ ಜಾಗೃತಿ ಕೇಂದ್ರವಾಗಿ ರೂಪಗೊಳ್ಳಲಿ ಎಂದು ಅವರು ಹಾರೈಸಿದರು. 

  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ಮಾತನಾಡಿ; ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಪಡೆಯಬೇಕು. ನಕಲಿ ಕಾರ್ಮಿಕರು ನೋಂದಣಿ ಆಗದಂತೆ ನೈಜ ಕಾರ್ಮಿಕರು ತಡೆಯಲು ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದರು.

ಗೌರವಾಧ್ಯಕ್ಷ ಚಿಕ್ಕ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಮಾತನಾಡಿದರು. ಸಿ‌ಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್, ಕಟ್ಟಡ ಕಾರ್ಮಿಕರ ಫೆಡರೇಷನ್ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಶೇಖರ ಬಂಗೇರ, ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮಾತನಾಡಿದರು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ ವಿ ಪದಾಧಿಕಾರಿಗಳಾದ ರೇಣುಕಾ, ಮಧುಶ್ರಿ ಮೊದಲಾದವರಿದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು.ಶಶಿಕಾಂತ್ ಅತಿಥಿಗಳನ್ನು ಗೌರವಿಸಿದರು. ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಪ್ರಾಸ್ತಾವಿಕ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!