Thursday, October 31, 2024

ಗಂಗೊಳ್ಳಿ ಖಾರ್ವಿಕೇರಿಯಲ್ಲಿ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿ ಲೋಕಾರ್ಪಣೆ

ಕುಂದಾಪುರ: ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯಲ್ಲಿ ಸುಸಜ್ಜಿತವಾದ ನಿರ್ಮಾಣಗೊಂಡಿರುವ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿ ಶುಕ್ರವಾರ ಲೋಕಾರ್ಪಣೆಗೆಗೊಂಡಿತು.

ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್ ಅವರು ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಿ, ರುದ್ರಭೂಮಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿಯ ಪ್ರಮುಖ ರವಿಶಂಕರ ಖಾರ್ವಿ, ಗಂಗೊಳ್ಳಿಯ ಖಾರ್ವಿಕೇರಿಯಲ್ಲಿ ಹಿಂದು ರುದ್ರ ಭೂಮಿ ನಿರ್ಮಾಣವಾಗಬೇಕೆಂದು ಈ ಭಾಗದ ಜನರ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಸರಕಾರ ಖಾರ್ವಿಕೇರಿಯಲ್ಲಿ ಸುಮಾರು ೨೦ ಸೆಂಟ್ಸ್ ಜಾಗವನ್ನು ಮಂಜೂರು ಮಾಡಿದ್ದಲ್ಲದೆ ಸುಮಾರು 15 ಲಕ್ಷ ರೂ. ಅನುದಾನವನ್ನು ನೀಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶವ ದಹನಕ್ಕೆ ಸಿಲಿಕಾನ್ ಛೇಂಬರ್‌ನ್ನು ಕೊಡುಗೆಯಾಗಿ ನೀಡಿದ್ದು, ಒಟ್ಟು ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ಹಿಂದು ರುದ್ರಭೂಮಿಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದರು.

ರುದ್ರಭೂಮಿಯಲ್ಲಿ ವಿದ್ಯುತ್ ಸಂಪರ್ಕದ ವ್ಯವಸ್ಥೆ, ಸೋಲಾರ್ ದೀಪಗಳ ಅಳವಡಿಕೆ, ಇಂಟರ್‌ಲಾಕ್ ಅಳವಡಿಕೆ, ಶವ ದಹನಕ್ಕೆ ಇನ್ನೊಂದು ಶೆಡ್ ರಚನೆ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ರುದ್ರಭೂಮಿಯ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳಿಗೆ ಸರಕಾರ ಮತ್ತು ದಾನಿಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ, ಯೋಜನೆಯ ವಲಯ ಮೇಲ್ವಿಚಾರಕ ಚಂದ್ರು, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯರಾದ ಕೇಶವ ಖಾರ್ವಿ, ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಚಂದ್ರ ಖಾರ್ವಿ, ಯಂಕಣಿ ಅಣ್ಣಪ್ಪಯ್ಯ ಖಾರ್ವಿ, ಸೂರ್ಯ ಕೋಟಾನ್, ದಿನೇಶ ಖಾರ್ವಿ, ರಾಮದಾಸ ಖಾರ್ವಿ, ಸೂರ್ಯ ಖಾರ್ವಿ, ಚಂದ್ರ ಖಾರ್ವಿ, ನಾಗರಾಜ ಖಾರ್ವಿ, ಕೃಷ್ಣ ಕೋಟಾನ್, ಪರಮೇಶ್ವರ ಕೋಟಾನ್, ವೆಂಕಟೇಶ ಕೋಟಾನ್, ಗುರುರಾಜ್ ಖಾರ್ವಿ, ಮಹೇಶ ಖಾರ್ವಿ, ಶೇಷಪ್ಪಯ್ಯ ಖಾರ್ವಿ, ಮಲ್ಪೆ ರಾಘವೇಂದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!