spot_img
Saturday, December 7, 2024
spot_img

ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಯಕ್ಷಗಾನ ಸಂಘದ ಬೆಳ್ಳಿ ಹಬ್ಬದ ಸಂಭ್ರಮ

ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ವ್ಯಕ್ತಿಯ ಹೆಸರಿನ ಜೊತೆ ಊರಿನ ಹೆಸರಿನ ಕೀರ್ತಿ ಹೆಚ್ಚಿಸುವವರು ಯಕ್ಷಗಾನ ಕಲಾವಿದರು ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಹೇಳಿದರು.

ಅವರು ಶನಿವಾರ ಕೊಕ್ಕರ್ಣೆ ಶ್ರೀ ಗಣೇಶ ಕಲಾಮಂದಿರದಲ್ಲಿ ಜರುಗಿದ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಯಕ್ಷಗಾನ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಅಂಗವಾಗಿ ಭಾಗವತ ದಿವಂಗತ ಪ್ರಭಾಕರ ಶಣೈಯವರ ಸಂಸ್ಮರಣ ಸಮಾರಂಭದಲ್ಲಿ ಅಭಿನಂದನಾ ಭಾಷಣದಲ್ಲಿ ಮಾತನಾಡಿದರು.

ಊರಿಂದ ಊರಿಗೆ ಯಕ್ಷಗಾನ ಕಲಾವಿದರು ನಡೆದುಕೊಂಡು ಹೋಗುವ ಕಾಲ ಹೋಗಿ ಇಂದು ಯಕ್ಷಗಾನ ಕಲಾವಿದರು ಉನ್ನತ ಶಿಕ್ಷಣ ಪಡೆದವರೂ ಮೇಳದ ಕಲಾವಿದರಾಗಿ ಉತ್ತಮ ವೇತನ ಪಡೆಯುವ ವರ್ಗ ಒಂದೆಡೆಯಾದರೆ ಪ್ರತೀ ಊರಿನಲ್ಲಿ ಹವ್ಯಾಸಿ ತಂಡಗಳು ಕಲೆಯನ್ನು ಕಲಾವಿದರನ್ನು ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.

ಇದೇ ಸಂದರ್ಬದಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಾದ ರಮಾ ಪ್ರಭಾಕರ ಶಣೈ, ಆರ್‍ಗೋಡು ಮೋಹನ್ ದಾಸ್ ಶಣೈ, ರಾಮಕೃಷ್ಣ ಮಂದಾರ್ತಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಜ್ಯೋತಿ ಪ್ರಭು ಮತ್ತು ಕಾರ್ಯದರ್ಶಿ ಯಶೋದರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.

ಕೊಕ್ಕರ್ಣೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಯಂತ ಪೂಜಾರಿ, ಪಟ್ಲ ಫೌಂಡೇಶನ್ ಬ್ರಹ್ಮಾವರದ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ , ಕಲಾ ಪೋಷಕ ಮಾಧವ ಪ್ರಭು, , ಪತ್ರಕರ್ತ ಬಂಡೀಮಠ ಶಿವರಾಮ ಆಚಾರ್ಯ, ಕವಯತ್ರಿ ಲಕ್ಷ್ಮೀ ಜಿ ಭಟ್, ಕೊಕ್ಕರ್ಣೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಅಂಬಾ ಶೆಟ್ಟಿ , ಜ್ಯೋತಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಹೀರಾ ಹೆಗ್ಡೆ ಇನ್ನಿತರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಜ್ಯೋತಿ ಪ್ರಭು ಸ್ವಾಗತಿಸಿ , ಯಕ್ಷಗಾನ ವಿಮರ್ಷಕ ಎಸ್. ವಿ. ಉದಯ ಕುಮಾರ್ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿ, ಕೊಕ್ಕರ್ಣೆ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿ, ಯಶೋಧ ಕಾಮತ್ ವಂದಿಸಿ , ಶಾಂಭವಿ ಉಡುಪ ಮತ್ತು ಶ್ರೀದೇವಿ ನಿರೂಪಿಸಿದರು

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಸಂಘದ ಸದಸ್ಯೆಯರಿಂದ ಪ್ರಸಂಗದ ಆರಂಭದ ಬಾಲ ಗೋಪಾಲ ಸೇರಿದಂತೆ ೧೪ ಮಂದಿ ಮಹಿಳೆಯರು ,ಬಾಲಕೀಯರಿಂದ ಜರುಗಿದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!