spot_img
Wednesday, January 22, 2025
spot_img

ಪಾಕಿಸ್ತಾನದ ಪ್ರಧಾನಿಯಾಗಿ ಮರು ಆಯ್ಕೆಯಾದ ಶೆಹಬಾಜ್ ಷರೀಫ್‌ಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ !

ಜನಪ್ರತಿನಿಧಿ (ನವ ದೆಹಲಿ) : ಪಾಕಿಸ್ತಾನದ ಪ್ರಧಾನಿಯಾಗಿ ಮರು ಆಯ್ಕೆಯಾದ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಮಂಗಳವಾರ) ಅಭಿನಂದಿಸಿದ್ದಾರೆ.

ತಮ್ಮ ಅಧಿಕೃತ ʼಎಕ್ಸ್ ʼ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

ಸಂಸತ್ತಿನ ಅಧಿವೇಶನದಲ್ಲಿ ಒಂದು ದಿನ ಮುಂಚಿತವಾಗಿ ಆಯ್ಕೆಯಾದ ನಂತರ ಶೆಹಬಾಜ್ ಷರೀಫ್ ನಿನ್ನೆ(ಸೋಮವಾರ) ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಅವರು ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗೆ ಪ್ರಧಾನಿಯಾಗಿ ಮೊದಲ ಅವಧಿಯನ್ನು ಪೂರೈಸಿದ್ದರು. ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷ, ಸರ್ಕಾರವನ್ನು ರಚಿಸಲು ಸಾಕಷ್ಟು ಕ್ಷೇತ್ರಗಳನ್ನು ಗಳಿಸಿರಲಿಲ್ಲ. ಆದರೆ ಬಹುಮತವನ್ನು ಪಡೆಯಲು ಇತರ ಪಕ್ಷಗಳೊಂದಿಗೆ ಸಮ್ಮಿಶ್ರ ಮಾಡಿಕೊಂಡು, ಎರಡನೇ ಭಾರಿಗೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿದರು.

ಅವರು ಪ್ರಧಾನಿಯಾಗಲು ಸಂಸತ್ತಿನಲ್ಲಿ 201 ಮತಗಳನ್ನು ಪಡೆದರು, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿ ಒಮರ್ ಅಯೂಬ್ ಅವರನ್ನು ಸೋಲಿಸಿದರು, ಅವರು 92 ಮತಗಳನ್ನು ಪಡೆದರು.

ಸೋಮವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಿತು. ಅಧ್ಯಕ್ಷ ಆರಿಫ್ ಪ್ರಮಾಣ ವಚನ ಬೋಧಿಸಿದರು.

ಷರೀಫ್ ಅವರು ಪಾಕಿಸ್ತಾನದ 77 ವರ್ಷಗಳ ಇತಿಹಾಸದಲ್ಲಿ 24 ನೇ ಪ್ರಧಾನಿಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!