Sunday, September 8, 2024

ಹಳೇ ವಿದ್ಯಾರ್ಥಿಗಳೇ ಶಾಲೆಯ ಆಸ್ತಿ – ಯಶಪಾಲ್ ಸುವರ್ಣ


ಉಡುಪಿ :ತಾನು ಕಲಿತ ಶಾಲೆಯನ್ನು ಮರೆಯದೇ‌ ಆ ಶಾಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ನೆರವಾಗುವವರೆ ಶಾಲೆಯ ನಿಜವಾದ ಆಸ್ತಿ ಎಂದು ಉಡುಪಿ ಶಾಸಕ ಯಶಪಾಲ ಸುವರ್ಣ ಅಭಿಪ್ರಾಯಪಟ್ಟರು.

ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ನಿರೂಪಮಾ ಪ್ರಸಾದ್ ಶೆಟ್ಟಿ ದಂಪತಿಗಳು ಲಯನ್ಸ್ ಕ್ಲಬ್ ಮೂಲಕ ನಿರ್ಮಿಸಿಕೊಟ್ಟ ನೀರಿನ ಸಂಪನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಾಲ್ಯಕಾಲದಲ್ಲಿ ಶಾಲೆಯಿಂದ ಉಪಕೃತನಾದ ವಿದ್ಯಾರ್ಥಿ‌ ಮುಂದೆ ಆ ಶಾಲೆಯನ್ನು ಮರೆಯದೆ ಇನ್ನಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಪ್ರತ್ಯಕ್ಷವಾಗಿ ಅಥವಾ ಸಹಕಾರಿಯಾಗುವುದೇ ನಿಜವಾದ ವಿದ್ಯಾರ್ಥಿಯ ಲಕ್ಷಣ. ಅಂತಹ ವಿದ್ಯಾರ್ಥಿಗಳೇ ಆ ಶಾಲೆಯ ದೊಡ್ಡ ಆಸ್ತಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಎಂ ಜೆ ಎಫ್ ನೇರಿ ಕರ್ನೇಲಿಯೋ, ಲಯನ್ಸ್ ಕ್ಯಾಬಿನೆಟ್ ಸೆಕ್ರೆಟರಿ ರವಿರಾಜ್ ನಾಯಕ್ ರೀಜನಲ್ ಚೇರ್ಮನ್ ಪ್ರಸಾದ್ ಶೆಟ್ಟಿ, ಅತಿಥಿಗಳಾಗಿ ಭಾಗವಹಿಸಿದ್ದರು.

ಲಯನ್ಸ್ ಅಧ್ಯಕ್ಷರಾದ ರವೀಶ್ ಚಂದ್ರ ಶೆಟ್ಟಿ, ಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಮಾಲಕರಾದ ಲಯನ್ ರಾಜಗೋಪಾಲ್, ಸೆಕ್ರೆಟರಿ ಉದಯಕುಮಾರ್ ಮುದ್ರಾಡಿ, ರೀಜನಲ್ ಸೆಕ್ರೆಟರಿ ದಿನೇಶ್ ಕಿಣಿ, ರಂಜನಾಶೆಟ್ಟಿ, ನಿರುಪಮಾ ಪ್ರಸಾದ್ ಶೆಟ್ಟಿ, ಖಜಾಂಚಿ ಲೂಯಿಸ್ ಲೋಬೋ, ಇಂದು ರಮಾನಂದ ಭಟ್, ಪ್ರಾಂಶುಪಾಲೆ ಡಾ. ಸುಮಾ, ಎಸ್ ಡಿ ಎಂ ಸಿ ಗೌರವಾಧ್ಯಕ್ಷೆ ತಾರಾದೇವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕೊಡುಗೆಯನ್ನು ನೀಡಿದ ನಿರುಪಮಾ ಮತ್ತು ಪ್ರಸಾದ್ ಶೆಟ್ಟಿ ದಂಪತಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಇಂದಿರಾ ಧನ್ಯವಾದಗೈದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!