Wednesday, October 30, 2024

ಕೊಡೇರಿ ಚೌಕಿ ಸುಬ್ಬಯ್ಯ ಖಾರ್ವಿ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ


ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೇರಿ ಚೌಕಿ ಸುಬ್ಬಯ್ಯ ಖಾರ್ವಿ ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ನಡೆಯಿತು.

ಸ್ವರಾಜ್ಯ 75 ತಂಡದ 29ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ನವಮಿ ಡಾಟ್ ಕಾಂ ಕೊಡೇರಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ ಕಾರ್ಯಕ್ರಮ (“ಸ್ವರಾಜ್ಯ 75 ತಂಡದೊಂದಿಗೆ) ಇವರುಗಳ ಆಶ್ರಯದಲ್ಲಿ ನಡೆಯಿತು.

ಡಾ.ಲತಾ ಪೂಜಾರಿ ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಚಾಲನೆ ನೀಡಿದರು. ಕುಂದನಾಡು ಅಧ್ಯಯನ ಕೇಂದ್ರದ ಮುಖ್ಯಸ್ಥರು ಉಪ್ಪುಂದ ಚಂದ್ರಶೇಖರ ಹೊಳ್ಳ ನಾಮಫಲಕ ಅನಾವರಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿದ್ದರು.

ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀರಾಜ್ ಗುಡಿ ವಿಚಾರ ಹಂಚಿಕೊಂಡರು. ಕ್ರಾಂತಿವೀರ ಸಾವರ್ಕರ್ ಯಶೋಗಾಥೆಯ ವಿಚಾರವನ್ನು ಕುಮಾರಿ ಮನ್ವಿತಾ.ಎಸ್ ಹಂಚಿಕೊಂಡರು.
ಪುಂಡಲೀಕ ನಾಯಕ್ ನಾಯ್ಕನಕಟ್ಟೆ, ಶಾಂತಿ ಗೋವಿಂದರಾಜ್, ವಿಠಲ್ ಖಾರ್ವಿ ಕೊಡೇರಿ, ವೆಂಕಟೇಶ್ ನಾವುಂದ, ವಿಜಯ ನರಸಿಂಹ ಐತಾಳ ವಿಚಾರ ಹಂಚಿಕೊಂಡರು. ಶಿವರಾಮ್ ಖಾರ್ವಿ, ಚಂದನ್ ಗೌಡ, ವಿಜಯ್ ಕೊಡೇರಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿಗಳು ಕುಟುಂಬಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಚಾಲಕರು (ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ರಕ್ಷಿತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!