Wednesday, October 30, 2024

ಕುಳ್ಳುಂಜೆ: ಸಮೃದ್ಧಿ ಯುವಕ ಮಂಡಲ ಗ್ರಾಮೀಣ ಕ್ರೀಡಾಕೂಟ

ಶಂಕರನಾರಾಯಣ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ಸಮೃದ್ಧಿ ಯುವಕ ಮಂಡಲ(ರಿ) ಕುಳ್ಳುಂಜೆ ಶಂಕರನಾರಾಯಣ ಇವರ ಸಹಯೋಗದೊಂದಿಗೆ ಗ್ರಾಮೀಣ ಕ್ರೀಡಾ ಕೂಟವು ಸಮೃದ್ಧಿ ಯುವಕ ಮಂಡಲದ ವಠಾರದಲ್ಲಿ ನೆರವೇರಿತು

ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಗಣೇಶ ತಲ್ಲಂಜೆ ಅಧ್ಯಕ್ಷತೆ ವಹಿಸಿದ್ದರು. ಶಂಕರನಾರಾಯಣ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಶ್ರೀಮತಿ ವತ್ಸಲಾ ಕ್ರೀಡಾಕೂಟ ಉದ್ಘಾಟಿಸಿ ಸಮೃದ್ಧಿ ಯುವಕ ಮಂಡಲ ಗ್ರಾಮೀಣ ಕ್ರೀಡಾಕೂಟದ ಮೂಲಕ ಗ್ರಾಮೀಣ ಭಾಗದ ಜನರನ್ನು ಒಗ್ಗೂಡಿಸಿ ಸಂಭ್ರಮಿಸುವುದು ಹೆಮ್ಮೆ, ಈಗಿನ ಒತ್ತಡದ ಜೀವನಕ್ಕೆ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ ಇದನ್ನು ಆಯೋಜಿಸಿದ ಸಮೃದ್ಧಿಯ ಸರ್ವರಿಗೂ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರ ವಿ.ಕೆ.ಆರ್ ಆಚಾರ್ಯ ಆಂಗ್ಲಮಾದ್ಯಮ ಶಾಲೆಯ ಶಿಕ್ಷಕ ಕೆ. ಪರಮೇಶ್ವರ ಉಡುಪ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್, ಓಟ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಚಂದ್ರಹಾಸ ಹೆಗ್ಡೆ ಚಂದನವನ ಬಾಡ್ಗಿರಜೆಡ್ಡು, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಘುರಾಮ ಕುಳ್ಳಂಜೆ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕಾರ್ಯದರ್ಶಿ ನಿತಿನ್ ಕುಮಾರ್ ಬಾಳೆಕೊಡ್ಲು ಸ್ವಾಗತಿಸಿದರು ರಾಘವೇಂದ್ರ ಶೆಟ್ಟಿ ಹೆಬ್ಬಾಡಿ ನಿರೂಪಿಸಿ, ನಾರಾಯಣ ಟಿ. ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!