spot_img
Wednesday, January 22, 2025
spot_img

ಕಜ್ಕೆಯಲ್ಲಿ ಪ್ರತೀದಿನವೂ ಪವಾಡದಂತೆ ನಡೆಯುತ್ತಿದೆ-ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ

ಬ್ರಹ್ಮಾವರ : ಕಜ್ಕೆಯಲ್ಲಿ ಪ್ರತೀದಿನವೂ ಪವಾಡದಂತೆ ನಡೆಯುತ್ತಿದೆ ಎಂದು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಹೇಳಿದರು.

ಕಜ್ಕೆಯಲ್ಲಿ ನೂಥನವಾಗಿ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆಗೆ ಅಂಗವಾಗಿ ಫೆಬ್ರವರಿ ೧೩ ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಬುಧವಾರ ಬಿಂಬ ಪ್ರತಿಷ್ಠಾಪನೆ ಗೊಳ್ಳಲಿರುವ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೆಲವು ವರ್ಷದ ಹಿಂದೆ ದಟ್ಟ ಕಾಡು ಆಗಿದ್ದ ಈ ಸ್ಥಳದಲ್ಲಿ ನಮ್ಮ ಶಾಖಾ ಮಠವಾಗಿದ್ದು ಬಳಿಕ ೨ ಚಾತುರ್ಮಾಸ್ಯ ವೃತ ಮತ್ತು ೧೫ ದಿನಗಳ ಹಿಂದಿನ ತನಕ ಅತಂಕ ಕಾಡುತ್ತಿದ್ದ ದೇವಿ ಶ್ರೀ ಅನ್ನಪೂರ್ಣೇಶ್ವರಿಯ ವಿಗ್ರಹ ರಚನೆ , ಗರ್ಭಗುಡಿಯ ಸುತ್ತು ಪೌಳಿಯ ಕೆಲಸಗಳು ಎಲ್ಲವೂ ಪವಾಡದಂತೆ ಮುಕ್ತಾಯ ಕಂಡು ಶ್ರೀ ದೇವಿಯು ಪ್ರತಿಷ್ಠಾಪನೆ ಗೊಂಡು ನೆಲೆ ನಿಂತು ಭಕ್ತರನ್ನು ಅನುಗ್ರಹಿಸುವುದು ಮಾತ್ರ ಉಳಿದಿದೆ ಎಂದರು.

ಇದೆ ಸಂದರ್ಬದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡಿದವರನ್ನು ಮತ್ತು ಭಾನುವಾರ ನಡೆದ ಹಸಿರು ಹೊರೆ ಕಾಣಿಕೆಗೆ ಸಹಕರಿಸಿದವರನ್ನು ಗೌರವಿಸಲಾಯಿತು.

ಅತಿಥಿ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಯು .ಕೆ. ಎಸ್ ಸೀತಾರಾಮ ಆಚಾರ್ಯ ಮಾತನಾಡಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಪ್ರತಿಷ್ಠಾಪನೆ ಗೊಂಡ ಬಳಿಕ ಇದೊಂದು ಐತಿಹಾಸಿಕ ಕ್ಷೇತ್ರವಾಗಲಿದೆ ಊರ ಜನರ ಸಹಕಾರದಿಂದ ಇಲ್ಲಿ ನಿತ್ಯ ಅನ್ನ ದಾನ ನಡೆಯುವಂತೆ ವ್ಯವಸ್ಥೆ ನಡೆಯುವಂತೆ ಆಗಬೇಕು ಎಂದರು.

ಸೌತ ಕೆನರಾ ಗೋಲ್ಡ್ ಸ್ಮಿತ್ ಕೋಪರೇಟಿವ ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ ಮಾತನಾಡಿ ಗುರುಗಳ ಸಂಕಲ್ಪದಂತೆ ಗ್ರಾಮೀಣ ಭಾಗದಲ್ಲಿ ಜನ ಸಾಮಾನ್ಯರ ಹಣ, ದೇಣಿಗೆ, ಶ್ರಮ ಶಕ್ತಿಯಿಂದ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದರು.
ದೇವಸ್ಥಾನದ ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ . ದೇವಸ್ಥಾನ ನಿರ್ಮಾಣ ಸಮಿತಿಯ ಗೌರವ ಮಾರ್ಗದರ್ಶಕರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕರುಣಾಕರ ಶೆಟ್ಟಿ , ಗ್ರಾಮದ ಪ್ರಮುಖರಾದ ಮಂದಾರ ಶೆಟ್ಟಿ , ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ , ಜೋಮ್ಲು ಬೊಬ್ಬರ್ಯ ಸೇವಾ ಸಮಿತಿಯ ಮಿಥುನ್ ಶೆಟ್ಟಿ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೋಕ್ತೇಸರ ಶೇಖರ ಆಚಾರ್ಯ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ನವೀನ ಆಚಾರ್ಯ , ನ್ಯಾಯವಾದಿ ಮಹೇಶ್ ಆಚಾರ್ಯ ಬೆಂಗಳೂರು, ಗಿರೀಶ್ ರಾವ್ ಕೊಯಮೂತ್ತೂರು , ರುದ್ರಯ್ಯ ಆಚಾರ್ಯ ಸಾಯಿಬರ ಕಟ್ಟೆ , ಶ್ರೀಧರ ಆಚಾರ್ಯ ಉಡುಪಿ , ರವೀಂದ್ರ ಆಚಾರ್ಯ ಪೇತ್ರಿ , ಮಲ್ಲೇಶಾಚಾರ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜೇಶ್ ಆಚಾರ್ಯ ಮಠದಬೆಟ್ಟು ಪ್ರಾಸ್ತಾವಿಕ ಮಾತನಾಡಿ , ಉಪಾಧ್ಯಕ್ಷ ವಿಶ್ವನಾಥ್ ಆಚಾರ್ಯ ಕಲ್ಗೋಳಿ ಸ್ವಾಗತಿಸಿ , ರಾಜೇಶ್ ಆಚಾರ್ಯ ಸಾಂತ್ಯಾರು ಮತ್ತು ಪ್ರಕಾಶ್ ಆಚಾರ್ಯ ಕುಕ್ಕೆಹಳ್ಳಿ ನಿರೂಪಿಸಿ, ಉದಯ ಆಚಾರ್ಯ ಗೋಳಿಯಂಗಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!