Sunday, September 8, 2024

ವಸತಿಶಾಲೆಗಳ ಪ್ರವೇಶದ್ವಾರದಲ್ಲಿಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆಗೆ ಕಾರಣ ಗೊತ್ತಿಲ್ಲ : ಮಧು ಬಂಗಾರಪ್ಪ

ಜನಪ್ರತಿನಧಿ (ಬೆಂಗಳೂರು) : ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಲವು ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆಗೆ ಕಾರಣ ಏನು ಎಂಬುವುದು ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ನಿಟ್ಟಿನಲ್ಲಿ ಈ ರೀತಿಯಾಗಿ ಘೋಷ ವಾಕ್ಯ ಬದಲಾವಣೆ ಮಾಡಿದ್ದಾರೆ ಎನ್ನುವ ವಿಚಾರ ಗೊತ್ತಿಲ್ಲ. ಕುವೆಂಪು ಅವರ ಕವಿತೆಯ ಸಾಲುಗಳು. ನಾವು ಕುವೆಂಪು ಆದರ್ಶದಂತೆಯೇ ನಡೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ.

ವಿದ್ಯೆ ಅಂದರೆ ಸರಸ್ವತಿ. ಕೈ ಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಲ್ಲ ಎಂಬುದು ನನ್ನ ಅಭಿಪ್ರಾಯ. ಏನಾದರೂ ಉದಾಹರಣೆಗಾಗಿ ಆ ರೀತಿ ಮಾಡಿರಬಹುದು. ಕೈ ಮುಗಿದು ಒಳಗೆ ಬಂದು ನಿಮ್ಮ ಹಕ್ಕನ್ನು ಪ್ರತಿಪಾದಿಸಿ ಎಂದು ಇದ್ದರೆ ಚೆನ್ನಾಗಿ ಇರುತ್ತಿತ್ತು. ಬಿಜೆಪಿಯವರು ವಿರೋಧ ಮಾಡಲಿ. ಕುವೆಂಪು ಅವರಿಗೆ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅವಮಾನ ಮಾಡುವುದಿಲ್ಲ ಎಂದವರು ಸ್ಪಷ್ಟ ಪಡಿಸಿದ್ದಾರೆ.

ಕುವೆಂಪು ಅವರ ಕವಿತೆಯ ಸಾಲುಗಳನ್ನು ತೆಗೆಯದೇ ಇನ್ನಷ್ಟು ಚೆನ್ನಾಗಿ ಘೋಷವಾಕ್ಯ ಮಾಡಬಹುದಿತ್ತು. ಸರಸ್ವತಿ ಹಾಗೂ ಜ್ಞಾನಕ್ಕೆ ಜಾತಿ, ಧರ್ಮ ಇರಲ್ಲ. ಬಿಜೆಪಿ ಅವರು ಹೇಳಿದ್ದಾರೆ ಅಂತ ಬದಲಾವಣೆ ಮಾಡಬೇಕು ಅಂತೇನಿಲ್ಲ. ಕೈ ಮುಗಿದು ಒಳಗೆ ಬಾ ಎನ್ನುವುದು ನಮ್ಮ ಸಂಪ್ರದಾಯ. ಹೊರದೇಶಗಳಲ್ಲೂ ಈ ಸಂಪ್ರದಾಯ ಪಾಲಿಸುತ್ತಾರೆ ಎಂದವರು ಪ್ರತಿಕ್ರಿಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!