spot_img
Wednesday, January 22, 2025
spot_img

ಬಹು ಕ್ಲಿಷ್ಟವಾದ ಸಾಹಸವೆನ್ನುವ ಕೆಲಸವನ್ನೇ ಕೈಗೆತ್ತಿಕೊಂಡ ಸಂಸ್ಥೆ ಯಶಸ್ವೀ ಕಲಾವೃಂದ-ಜಯಪ್ರಕಾಶ ಹೆಗ್ಡೆ

ಸಿನ್ಸ್-1999-ಶ್ವೇತಯಾನ ಉದ್ಘಾಟನೆ

ತೆಕ್ಕಟ್ಟೆ: ಕಲಾಭಿಮಾನಿಗಳ ಆಸಕ್ತಿಯನ್ನು ಗುರುತಿಸಿ, ಯಶಸ್ವಿ ಸಂಸ್ಥೆ ಪ್ರದರ್ಶನಗಳನ್ನು ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಬೆನ್ನೆಲುಬಾಗಿದ್ದ ಸದಸ್ಯರನ್ನು ರಜತ ಸಂಭ್ರಮದಲ್ಲಿ ನೆನಪಿಸುವ ಕೆಲಸ ಮಾಡುತ್ತಿರುವ ಕಲಾವೃಂದ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಗಳಿವೆ. ಕಲಾ ಪೋಷಕರಿಗೆ ವೇದಿಕೆ ನಿರ್ಮಿಸಿ, ಅವರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಕಾರ್ಯ ಸಾಧರಣವಲ್ಲ. ಬಹು ಕ್ಲಿಷ್ಟವಾದ ಸಾಹಸವೆನ್ನಿಸುವ ಕೆಲಸವನ್ನೇ ಕೈಗೆತ್ತಿಕೊಂಡು ಮುನ್ನುಗ್ಗುತ್ತಿರುವ ಸಂಸ್ಥೆ ಇಂದು ಇಪ್ಪತ್ತೈದರ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. 108 ಕಾರ್ಯಕ್ರಮದ ಯೋಜನೆ ಸಾವಿರದಷ್ಟು ಆಗಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮಾತನ್ನಾಡಿದರು.

ಕನ್ನುಕೆರೆಯಲ್ಲಿ ಸಮುದ್ಯತಾ ಸಹಯೋಗದೊಂದಿಗೆ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಿನ್ಸ್ 1999 ಶ್ವೇತಯಾನ ರಜತ ಸಂಭ್ರಮವನ್ನು ಫೆಬ್ರವರಿ 18ರಂದು ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಉದ್ಘಾಟಿಸಿ ಮಾತನ್ನಾಡಿದರು.

ಯಕ್ಷ ಸಾಹಿತಿ ಪವನ್ ಕಿರಣ್‌ಕೆರೆ ಶುಭಾಶಂಸನೆಗೈದು ಯಶಸ್ವಿ ಸಂಸ್ಥೆ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿತ್ತೇ ಹೊರತು ಯಕ್ಷಗಾನದಿಂದ ತಾನು ಮುಖ್ಯ ವಾಹಿನಿಗೆ ಬರುವ ಯಾವ ಪ್ರಯತ್ನ ಮಾಡಿರಲಿಲ್ಲ. ಇಪ್ಪತ್ತೈದು ವರ್ಷದ ಈ ಯಾನ ಪರಿಶುದ್ಧ ಶ್ವೇತಯಾನ. ಎಲ್ಲಾ ತರಗತಿಗಳನ್ನು ನೆರವೇರಿಸುತ್ತಾ, ಅದರಲ್ಲಿ ಅಭಿರುಚಿ ಹುಟ್ಟಿಸುತ್ತಾ ಯಕ್ಷಗಾನದ ಜೊತೆಗೆ ಉಳಿದ ಕಲೆಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಕಲೆಯನ್ನು ಕೈ ದಾಟಿಸುವಲ್ಲಿ ಸರ್ವ ಪ್ರಯತ್ನ ಮಾಡುತ್ತಿರುವ ಏಕೈಕ ಸಂಸ್ಥೆ ಯಶಸ್ವಿ ಕಲಾವೃಂದ. ಕಲೆಯು ಚಿರಂಜೀವಿಯಾಗಿ ಉಳಿಸಬೇಕು ಅಂತಾದರೆ ಮುಂದಿನ ತಲೆಮಾರಿಗೆ ಕಲೆಯನ್ನು ಕಲಿಸಿ ಹಸ್ತಾಂತರಿಸಬೇಕು, ಕೈ ದಾಟಿಸಬೇಕು. ಈ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ ೧೯೯೯ರಿಂದ ಇಲ್ಲಿಯವರೆಗೆ ಕಲೆಯನ್ನು ಕೈ ದಾಟಿಸುತ್ತಾ ಬಂದಿದೆ. ಅದರ ಪರಿಣಾಮ ಕಲೆಯ ಎಲ್ಲಾ ವಿಭಾಗದ ಕಲಾ ತಂಡವೇ ಪ್ರತೀ ವರ್ಷ ರಂಗವೇರುತ್ತಾ ಕಲೆಯನ್ನು ಮೆರೆಸುತ್ತಿದೆ. ಇಂತಹ ಕಾರ್ಯವನ್ನು ಸ್ತುತಿಸಿದರೆ ಅತಿಶಯೋಕ್ತಿ ಆಗಲಾರದು ಎಂದರು.

ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೆಕಾರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅರುಣ್‌ಕುಮಾರ್ ಶೆಟ್ಟಿ, ಯೋಗೀಂದ್ರ, ಕೃಷ್ಣಮೂರ್ತಿ ಮಂಜರು, ಪ್ರಾಚಾರ್ಯ ಕೆ.ಪಿ. ಹೆಗ್ಡೆ, ಕೊರ್ಗಿ ವಿಠ್ಠಲ ಶೆಟ್ಟಿ, ಸೀತಾರಾಮ ಶೆಟ್ಟಿ ಮಲ್ಯಾಡಿ, ಗೋಪಾಲ ಪೂಜಾರಿ, ಹೆರಿಯ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಘವೇಂದ್ರ ತುಂಗ ಸ್ವಾಗತಿಸಿ, ಸೀತಾರಾಮ ಶೆಟ್ಟಿ ಕೊಕೂರು ಪ್ರಾಸ್ತಾವಿಕ ಮಾತನ್ನಾಡಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ವಂದಿಸಿದರು. ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಲಾ ಪೋಷಕರ ಕಲಾವಂತಿಕೆಯಲ್ಲಿ ಯಕ್ಷಗಾನ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!