Sunday, September 8, 2024

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರಕೂರು: ಫೆ.19,20,21-ಹಾಲು ಹಬ್ಬ ವಾರ್ಷಿಕ ಪೂಜೆ ಮತ್ತು ಗೆಂಡೋತ್ಸವ-2024

ಬಾರಕೂರು: ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಲುಹಬ್ಬ ವಾರ್ಷಿಕ ಪೂಜೆ ಮತ್ತು ಗೆಂಡ ಸೇವೆ ದಿನಾಂಕ 19 02.2024ನೇ ಸೋಮವಾರದಿಂದ 21.02.2024ರ ತನಕ ನಡೆಯಲಿದೆ.

ದೇವಳದ ತಂತ್ರಿಯವರಾದ ವೇದಮೂರ್ತಿ ಶ್ರೀ ಎನ್ ರಮೇಶ್ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ

ದಿನಾಂಕ 19. 02. 2024ನೇ ಸೋಮವಾರ ಬೆಳಿಗ್ಗೆ 7:30 ರಿಂದ ಸಾಮೂಹಿಕ ಪ್ರಾರ್ಥನೆ, 9 ರಿಂದ ನವಕ ಪ್ರಧಾನ ಅಧಿವಾಸ ಹೋಮ ಹಾಗೂ ಚಂಡಿಕಾ ಹೋಮ ಮಧ್ಯಾಹ್ನ 12:30 ಕ್ಕೆ ಕಲಶಾಭಿಷೇಕ ಮಹಾಪೂಜೆ, ಬ್ರಾಹ್ಮಣ ಸುಹಾಸಿನೀ ಆರಾಧನೆ,ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ ಸಂಜೆ 3 ಕ್ಕೆ ನಲ್ಕುದ್ರು ಭಂಡಾರದ ಮನೆಯಿಂದ ದೇವರ ಬಾಳು ಭಂಡಾರ ತರುವುದು. ಸಂಜೆ 5 ಕ್ಕೆ ಶ್ರೀಚಕ್ರಾರಧನೆ, ಪ್ರಸನ್ನ ಪೂಜೆ 5:30ಕ್ಕೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಗಾಂಧಿನಗರ ಬೈಕಾಡಿ ಇವರಿಂದ ಕುಣಿತದ ಭಜನೆ ರಾತ್ರಿ 6 15ಕ್ಕೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಡಪಾಡಿ ಇವರಿಂದ ಕುಣಿತದ ಭಜನೆ ಸಂಜೆ 7 ರಿಂದ ರಂಗ ಪೂಜೆ ರಾತ್ರಿ 8ಕ್ಕೆ ಬಲಿ ಉತ್ಸವ ಅಷ್ಟಾವಧಾನ ಸೇವೆ 9ಕ್ಕೆ ಗೆಂಡಸೇವೆ ರಾತ್ರಿ 10ಕ್ಕೆ ಪ್ರಸಾದ ವಿತರಣೆ 20.02.2024ನೇ ಮಂಗಳವಾರ ಬೆಳಿಗ್ಗೆ 7:15ಕ್ಕೆ ಶ್ರೀಮೂಡು ಗಣಪತಿ ಸೇವೆ, 8.30 ಕ್ಕೆ ಶ್ರೀ ನಾಗದೇವರಿಗೆ ಹಾಲಿಟ್ಟು ಸೇವೆ ಬೆಳಿಗ್ಗೆ 9:30 ರಿಂದ ಢಕ್ಕೆ ಬಲಿ. 11 ರಿಂದ ತುಲಾಭಾರ ಹರಿವಾಣ ನೈವೇದ್ಯ ಕುಂಕುಮಾ ರ್ಚನೆ ಮಂಗಳಾರತಿ ಇನ್ನಿತರ ಸೇವೆಗಳು. ಮಧ್ಯಾಹ್ನ 12:30 ರಿಂದ ಮಹಾಪೂಜೆ ಮಧ್ಯಾಹ್ನ 1. 15ರಿಂದ ಮಹಾಸಭೆ ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ 2 ರಿಂದ ಅನ್ನಸಂತರ್ಪಣೆ ರಾತ್ರಿ 9:00 ರಿಂದ ಕುಮಾರ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ. 21.02.2024ನೇ ಬುಧವಾರ ಸೂರ್ಯೋದಯಕ್ಕೆ ಮಹಾ ಸಂಪ್ರೋಕ್ಷಣೆ ಹಾಗೂ ಶುದ್ಧ ಕಲಶ ಶ್ರೀದೇವರ ಭಂಡಾರವನ್ನು ಭಂಡಾರದ ಮನೆಗೆ ಕೊಂಡು ಹೋಗುವುದು ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!