Sunday, September 8, 2024

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆರ್ಥಿಕತೆಯ ದುರುಪಯೋಗ ಮಾಡಿಕೊಳ್ಳಲಾಗಿತ್ತು : ವಿತ್ತ ಸಚಿವೆ ಕಿಡಿ

ಜನಪ್ರತಿನಿಧಿ (ನವ ದೆಹಲಿ) : ”ಸಾಧಿಸಿದ್ದನ್ನೆಲ್ಲ ಹಾಳು ಮಾಡುವ ಪಾಂಡಿತ್ಯ ಕಾಂಗ್ರೆಸ್‌ಗೆ ಇದೆ” ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಶನಿವಾ)ರ ಲೋಕಸಭೆಯಲ್ಲಿ ಮತ್ತೆ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯಸಭಾ ಕಲಾಪದಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ ಕುರಿತ ಅಲ್ಪಾವಧಿಯ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ನಿರ್ಮಲಾ, ”10 ವರ್ಷಗಳ ಯುಪಿಎ ಆಡಳಿತದಲ್ಲಿ ಹಣದುಬ್ಬರವನ್ನು ನಿರ್ವಹಿಸುವಾಗ ಹಿಂದಿನ ಸರಕಾರದ ಸಾಧನೆಗಳನ್ನು ಹಾಳುಮಾಡುವ ಕಲೆಯನ್ನು ದೇಶದ ಅತ್ಯಂತ ಹಳೆಯ, ಹಿರಿಯ ಪಕ್ಷ ಎಂದು ಹೇಳಿಸಿಕೊಳ್ಳುವ ಕಾಂಗ್ರೆಸ್ ಕರಗತ ಮಾಡಿಕೊಂಡಿತ್ತು” ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ಮಾಡಿದ್ದಾರೆ.

2004-2014ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆರ್ಥಿಕತೆಯ ದುರುಪಯೋಗ ಮಾಡಿಕೊಳ್ಳಲಾಗಿತ್ತು. ಮೋದಿ ನೇತೃತ್ವದ ಸರಕಾರ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು 10 ವರ್ಷಗಳ ಕಾಲ ಶ್ರಮಿಸಿತು. ಭಾರತವನ್ನು ‘ಫ್ರೇಜಿಲ್ ಫೈವ್’ ನಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಗೆ ತಂದಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಪ್ರತಿಪಾಧಿಸಿದರು.

ಇನ್ನು, ಅಟಲ್ ಬಿಹಾರಿ ವಾಜಪೇಯಿ ಸರಕಾರದ ಕೊನೆಯ ವರ್ಷದಲ್ಲಿ ಹಣದುಬ್ಬರ ದರವು ಶೇಕಡಾ 4 ಕ್ಕಿಂತ ಕಡಿಮೆ ಇತ್ತು, ಆದರೆ 10 ವರ್ಷಗಳ ಯುಪಿಎ ಆಡಳಿತದಲ್ಲಿ ಇದು ಗಣನೀಯವಾಗಿ ಹೆಚ್ಚಿತ್ತು ಎಂದು ಮತ್ತೆ ಆರೋಪಿಸಿದ್ದಾರೆ.

ಶ್ವೇತಪತ್ರ ಹೊರತರಲು ಕಾರಣಗಳನ್ನು ನೀಡಿದ ಸಚಿವೆ ನಿರ್ಮಲಾ, ”ಈ ಹಿಂದೆ ಇದೇ ರೀತಿಯ ಕ್ರಮ ಕೈಗೊಂಡಿದ್ದರೆ ಸಂಸ್ಥೆಗಳು, ಹೂಡಿಕೆದಾರರು ಹಾಗೂ ಜನರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದಿತ್ತು. ಚುನಾಯಿತ ಸರಕಾರವಾಗಿ, ಯುಪಿಎ ಆಡಳಿತದಲ್ಲಿ ಆರ್ಥಿಕತೆಯ ನೈಜ ಚಿತ್ರಣ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮೋದಿ ಸರಕಾರ ಕೈಗೊಂಡ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಸಂಸತ್ತಿಗೆ ತಿಳಿಸುವುದು ಕಡ್ಡಾಯವಾಗಿತ್ತು” ಎಂದಿದ್ದಾರೆ.

ಭಾರತಕ್ಕೆ ಸ್ವಚ್ಛ ಹಾಗೂ ಜವಾಬ್ದಾರಿಯುತ ಆಡಳಿತದ ಅಗತ್ಯವಿದೆಯೇ ಹೊರತು ಸಂವಿಧಾನೇತರ ಸಂಸ್ಥೆಯ ಮೂಲಕ ಆಡಳಿತವಲ್ಲ ಎಂದು ಸೋನಿಯಾ ಗಾಂಧಿ ನೇತೃತ್ವದ ಹಿಂದಿನ ರಾಷ್ಟ್ರೀಯ ಸಲಹಾ ಮಂಡಳಿಯ ಕುರಿತು ಲೇವಡಿ ಮಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!