Sunday, September 8, 2024

ಫೆ.12ರಂದು ವಂಡ್ಸೆ ಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ಮೇಳ

ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಮತ್ತು ಕಲಾ ಮೇಳ ಫೆಬ್ರವರಿ 12 ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯ ತನಕ ಶಾಲಾ ಆವರಣದಲ್ಲಿ ನಡೆಯಲಿದೆ.

ಕಳೆದ ವರ್ಷ ಇಲ್ಲಿ ಪ್ರಯೋಗಿಕ ವಿಜ್ಞಾನ ಮತ್ತು ಕಲಾ ಮೇಳ ನಡೆಸಿದ್ದು ಅದರ ಯಶಸ್ಸಿನಿಂದ ಪ್ರೇರಿತವಾಗಿ ಈ ವರ್ಷವೂ ಕೂಡಾ ಇನ್ನಷ್ಟು ಹೊಸತನದೊಂದಿಗೆ ಆಯೋಜನೆ ಮಾಡಲಾಗುತ್ತಿದೆ.

4ನೇ ತರಗತಿಯಿಂದ 7ನೇ ತರಗತಿಯ ತನಕ ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿದ ವಿಜ್ಞಾನ ಮಾದರಿ ಹಾಗೂ ಪ್ರಯೋಗಗಳನ್ನು ತಮ್ಮದೇ ಪರಿಕಲ್ಪನೆಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಸುಮಾರು 100ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು ಹಾಗೂ ಪ್ರಯೋಗಗಳ ಪ್ರದರ್ಶನ ನಡೆಯಲಿದೆ. ಜೊತೆಯಲ್ಲಿ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳೇ ತಯಾರಿಸಿದ ವಿವಿಧ ಕ್ರಾಫ್ಟ್ ಪ್ರದರ್ಶನವೂ ನಡೆಯಲಿದೆ. ಶಾಲೆಯ ಎಲ್ಲ ಮಕ್ಕಳು ಕಲಾ ಮೇಳದಲ್ಲಿ ತಮ್ಮ ಕ್ರಾಪ್ಟ್ ವಿನ್ಯಾಸಗಳನ್ನು ಪ್ರದರ್ಶನ ಮಾಡಲಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ ಹಾಗೂ ಕಲಾ ಮೇಳ ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ಶೂನ್ಯ ಬಂಡವಾಳ ಹಾಗೂ ಶೂನ್ಯ ಸಮಯದಲ್ಲಿ ವಿಜ್ಞಾನದ ಮಾದರಿಗಳನ್ನು ಮಕ್ಕಳು ತಯಾರಿಸಿದ್ದಾರೆ. ಕಸದಿಂದ ರಸ ಎನ್ನುವ ಯೋಚನೆಯಲ್ಲಿ ನಿರುಪಯೂಕ್ತ ವಸ್ತುಗಳನ್ನು ಬಳಸಿಕೊಂಡು ವಿವಿಧ ವಿಜ್ಞಾನದ ಮಾದರಿಗಳು-ಪ್ರಯೋಗಗಳನ್ನು ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಗು ಪ್ರಾಥಮಿಕ ಹಂತದಿಂದಲೇ ವಿಜ್ಞಾನದ ಬಗ್ಗೆ ಕುತೂಹಲ ಹಾಗೂ ಶೋಧನಾ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎನ್ನುವ ನೆಲೆಯಲ್ಲಿ ವಿಜ್ಞಾನದ ಪ್ರಯೋಗಳಿಗೆ ಒತ್ತನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿನ ವಿಜ್ಞಾನದ ಆಸಕ್ತಿ ಹಾಗೂ ಕಲಿಕಾ ಮಟ್ಟದ ಮೌಲ್ಯ ಮಾಪನವೂ ಇಲ್ಲಿ ನಡೆಯುತ್ತದೆ.

ಸಭಾ ಕಾರ್ಯಕ್ರಮ ಉದ್ಘಾಟನೆ ವಿಜ್ಞಾನದ ಮಾದರಿಯ ಮೂಲಕವೇ ವಿಶಿಷ್ಠವಾಗಿ ನಡೆಯಲಿದೆ. ಬಳಿಕ ಅತಿಥಿಗಳು ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳನ್ನು ವೀಕ್ಷಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಮಾದರಿಗಳ ವಿಶೇಷತೆಯನ್ನು ವಿವರಿಸುತ್ತಾರೆ. ವಿದ್ಯಾರ್ಥಿಗಳ ನೇರ ಸಂಹವನಕ್ಕೂ ಇದು ಅವಕಾಶವಾಗುತ್ತದೆ. ವಿಜ್ಞಾನ ಹಾಗೂ ಕಲಾ ಮೇಳವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಕೂಡಾ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!