spot_img
Wednesday, March 4, 2026
spot_img

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಯಲ್ಲಿ ರಾಜ್ಯ ಮಟ್ಟದ ಕಲಾ ಶಿಬಿರ ‘ವರ್ಣಾಂಜಲಿ’ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಯ ಮಾತಂಗವನದಲ್ಲಿ ಫೆ.೮ರಂದು ಆರ್ಟಿಸ್ಟ್ ಪೋರಮ್ (ಆರ್.) ಉಡುಪಿ ಇವರ ಸಹಯೋಗದೊಂದಿಗೆ ವರ್ಣಾಂಜಲಿ ಎಂಬ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡುತ್ತಾ ವಿದ್ಯಾರ್ಥಿಗಳ ಸರ್ವತೋಮುಖವಾದ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸುತ್ತಿದ್ದು, ಈ ಕಾರ್ಯಕ್ರಮ ಮೂರು ದಿನಗಳ ತನಕ ನಡೆಯಲಿರುವುದು. ಆರ್ಟಿಸ್ಟ್ ಪೋರಮ್ ನ ಸಹಯೋಗದಿಂದ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಸಿದ್ಧ ಕಲಾವಿದರು ಆಗಮಿಸಿದ್ದು, ಅವರ ಕೈಚಳಕದಿಂದ ಹಲವಾರು ಕಲಾಕೃತಿಗಳು ಮೂಡಿಬರಲಿಕ್ಕಿವೆ. ಅದೆಲ್ಲದರ ಪ್ರದರ್ಶನವನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಪೋಷಕರೂ ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಆರ್ಟಿಸ್ಟ್ ಪೋರಮ್ ಉಡುಪಿ ಇದರ ಕಾರ್ಯದರ್ಶಿ ಸಕು ಪಾಂಗಾಳ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಗಳಿದ್ದು, ಅವುಗಳನ್ನು ಹೊರ ಹಾಕಬೇಕಾದರೆ ಮಾರ್ಗದರ್ಶನ ಅತ್ಯಗತ್ಯ. ಮಗು ಹೇಗೆ ಭವಿಷ್ಯ ರೂಪಿಸಿಕೊಳ್ಳುಬೇಕೆಂಬುದು ಅದರ ಆಯ್ಕೆ. ಅದರೆ ಅದಕ್ಕೆ ಎಲ್ಲಾ ಕಲಾವಿದರ ಕೈಚಳಕಗಳನ್ನು ಉಣಬಡಿಸಿದರೆ, ಮಗು ತನ್ನಿಷ್ಟದ ಕಲೆಯನ್ನು ಆಯ್ದುಕೊಳ್ಳಬಹುದು. ಆ ದಿಶೆಯಲ್ಲಿ ಈ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದು ಅಭಿಮಾನದಿಂದ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ರಜತಮಹೋತ್ಸವದ ಶುಭಾವಸರದಲ್ಲಿ ಆರ್ಟಿಸ್ಟ್ ಪೋರಮ್ (ಆರ್.) ಉಡುಪಿ ಯವರ ಸಹಯೋಗ ದೊರೆತು ಇಂತಹ ಒಂದು ಕಲಾಶಿಬಿರ ಆಯೋಜನೆಯಾಗಿರುವುದರ ಕುರಿತು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಆರ್ಟಿಸ್ಟ್ ಪೋರಮ್(ಆರ್) ಉಡುಪಿಯ ಅಧ್ಯಕ್ಷರಾದ ರಮೇಶ್ ರಾವ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ. ಎಮ್, ಪ್ರಾಥಮಿಕ ಶಾಲಾ ಮೊಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬಸವರಾಜ ಕುಟ್ನಿ, ಗದಗ, ಚಂದ್ರನಾಥ ಆಚಾರ್ಯ, ಬೆಂಗಳೂರು, ಗಣೇಶ್ ಸೋಮಯಾಜಿ, ಮಂಗಳೂರು, ಜನಾರ್ದನ ಹಾವಂಜೆ, ಹಾವಂಜೆ, ಕಂದನ್ ಜಿ, ಬೆಂಗಳೂರು, ಕಿಶೋರ್ ಕುಮಾರ್, ತುಮಕೂರು, ಕೃಷ್ಣ ಶೆಟ್ಟಿ, ಬೆಂಗಳೂರು, ಮೋಹನರಾವ್ ಬಿ ಪಾಂಚಾಲ್, ಹಂಪಿ, ಸಾವಿತ್ರೀ ಯರಶಿ ಬಾಗಲಕೋಟೆ, ಸಿಂಧು ಕಾಮತ್, ಉಡುಪಿ, ಶಂಕರ್ ಕೆ ವಿ, ಹುಬ್ಬಳ್ಳಿ, ವಿಶ್ವಾಸ್ ಎಂ, ಕಾಸರಗೋಡು, ವಿಲ್ಸನ್ ಸೋಜಾ, ಕಾಸರಗೋಡು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಶಶಿಕಲಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಸುಮಲತಾ ಜೋಗಿ ಸ್ವಾಗತಿಸಿ, ಸುನೀತಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!