spot_img
Tuesday, February 18, 2025
spot_img

ಕುಂದಾಪುರದಲ್ಲಿ ನಿರ್ಮಾಣಗೊಂಡಿದೆ ಐಶಾರಾಮಿ ಹೊಟೇಲ್ ‘ಯುವಮನೀಶ್’: ಜನವರಿ 28ರಂದು ಉದ್ಘಾಟನೆ

ಕುಂದಾಪುರ, ಜ.26 (ಜನಪ್ರತಿನಿಧಿ ವಾರ್ತೆ) ಉಡುಪಿ ಜಿಲ್ಲೆಯ ಕುಂದಾಪುರ-ಬೈಂದೂರು ತಾಲೂಕಿನಲ್ಲಿ ಪ್ರವಾಸೋಧ್ಯಮಮಕ್ಕೆ ವಿಫುಲ ಅವಕಾಶಗಳಿದ್ದು ಇಲ್ಲಿನ ಕಡಲ ಕಿನಾರೆ, ಪ್ರಸಿದ್ಧ ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರಿಗೆ ಅನುಕೂಲ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಸ್ತುತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದನ್ನು ಮನಗಂಡು ಕುಂದಾಪುರ ಹೃದಯ ಭಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಹೋಟೆಲ್ ಮತ್ತು ರೆಸ್ಟೋರೆಂಟ್ ನ್ನು ಒಳಗೊಂಡ ಯುವ ಮನೀಶ್ ಕುಂದಾಪುರದ ಗಾಂಧಿ ಮೈದಾನದ ಎದುರು ನಿರ್ಮಾಣಗೊಂಡಿದ್ದು ಜನವರಿ 28ರಂದು ಆದಿತ್ಯವಾರ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರಾದ ಬಿ. ಉದಯಕುಮಾರ್ ಶೆಟ್ಟಿ ತಿಳಿಸಿದರು.

ಅವರು ಜ.26ರಂದು ನೂತನ ಹೋಟೆಲ್ ಯುವ ಮನೀಶ್ ದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಾಲೇ ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುತ್ತಾ ಬಂದಿರುವ ಪ್ರತಿಷ್ಠಿತ ಜೆ.ಎನ್.ಎಸ್. ಕಂಪೆನಿಯ ಆಡಳಿತ ಮುಖ್ಯಸ್ಥರಾದ ಜಯಶೀಲ ಎನ್. ಶೆಟ್ಟಿ ಮತ್ತು ಮನೀಶ್ ಜೆ. ಶೆಟ್ಟಿ ಹಾಗೂ ಪ್ರತಿಷ್ಠಿತ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಆಡಳಿತ ಮುಖ್ಯಸ್ಥರಾದ ಬೈಲೂರು ಉದಯ್ ಕುಮಾರ್ ಶೆಟ್ಟಿ ಮತ್ತು ಬೈಲೂರು ವಿನಯ್ ಕುಮಾರ್ ಶೆಟ್ಟಿಯವರ ಪಾಲುದಾರಿಕೆಯಲ್ಲಿ ಯುವ ಮನೀಶ್’ ಹೆಸರಿನ ಸುಸಜ್ಜಿತವಾದ ಬ್ಯುಸಿನೆಸ್ ಹೋಟೆಲ್ ನಿರ್ಮಿಸಲಾಗಿದೆ ಎಂದರು.

ವಿಶೇಷತೆಗಳು:
ಯುವ ಮನೀಶ್’ ಬ್ಯುಸಿನೆಸ್ ಹೋಟೆಲ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸೆಂಟ್ರಲ್ ಏರ್ ಕಂಡೀಶನ್ ವ್ಯವಸ್ಥೆ ಹೊಂದಿದೆ. ಸುಮಾರು 100 ಜನರು ಕುಳಿತುಕೊಳ್ಳಬಹುದಾದ ’ಲಷಿಕಾ’ ವೆಜ್ ರೆಸ್ಟೋರೆಂಟ್, ’ಸೀ ರಾಕ್’ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ರೂಫ್ ಟಾಪ್ ರೆಸ್ಟೋರೆಂಟ್ ಹೊಂದಿರುತ್ತದೆ. ದೂರದ ನಗರಗಳಿಂದ ಆಗಮಿಸುವ ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಗುಣಮಟ್ಟದ ಆಹಾರ ನೀಡಲು ಸಂಸ್ಥೆ ಬದ್ಧವಾಗಿದೆ.

ಈ ಹೋಟೆಲ್‌ನಲ್ಲಿ 54 ಸುಸಜ್ಜಿತ ರೂಮ್‌ಗಳಿದ್ದು ಅದರಲ್ಲಿ 2 ಕ್ಲಬ್ ಸ್ಯೂಟ್ ರೂಮ್, 22 ಎಕ್ಸಿಕ್ಯೂಟಿವ್ ಟ್ವಿನ್, 30 ಎಕ್ಸಿಕ್ಯೂಟಿವ್ ಕಿಂಗ್ ರೂಂ ಸೌಕರ್ಯ ಹೊಂದಿದ್ದು ಗ್ರಾಹಕರ ಸೇವೆಗೆ ಸಿದ್ದಗೊಂಡಿದೆ.

ವಿಶಾಲ ಪಾರ್ಕಿಂಗ್ ವ್ಯವಸ್ಥೆ:
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಬಳಿಯಲ್ಲಿ ಹೋಟೆಲ್ ಇದ್ದು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲಮಾಳಿಗೆಯಲ್ಲಿ ಮತ್ತೆ ಓಪನ್ ಪಾರ್ಕಿಂಗ್ ಮಾಡಲು ಸೂಕ್ತ ಅವಕಾಶವಿದೆ ಎಂದರು.

ಉದ್ಘಾಟನೆ:
ಜೆ.ಎನ್.ಎಸ್. ಕಂಪೆನಿಯ ಆಡಳಿತ ಮುಖ್ಯಸ್ಥರಾದ ಜಯಶೀಲ ಎನ್. ಶೆಟ್ಟಿ ಮಾತನಾಡಿ, ನನ್ನ ಊರು ಬೈಂದೂರು ಸಮೀಪದ ಹೇರಂಜಾಲು. ಕುಂದಾಪುರದಲ್ಲಿ ಒಳ್ಳೆಯ ಹೊಟೇಲ್ ನಿರ್ಮಿಸುವ ಕನಸಿತ್ತು. ಅದು ಈಗ ನೆರವೇರಿದೆ. ಇದು ಸೇವೆಯ ಉದ್ದೇಶದಿಂದ ಆರಂಭಿಸಲಾಗಿದೆ. ಯುವ ಮನೀಶ್ ಬ್ಯುಸಿನೆಸ್ ಹೋಟೆಲ್‌ನ್ನು ಜ.28ರ ಬೆಳಿಗ್ಗೆ 10-30ಕ್ಕೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ, ಘಟಪ್ರಭಾ ಇಲ್ಲಿನ ಮ.ನಿ.ಪ್ರ. ಡಾ| ಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನಗೈಯಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅಂಗವಿಕಲ, ಹಿರಿಯ ನಾಗರಿಕ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಕಾನೂನು ಸಂಸದೀಯ ಮತ್ತು ಪ್ರವಾಸೋಧ್ಯಮ ಸಚಿವರಾದ ಎಚ್.ಕೆ. ಪಾಟೀಲ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ. ಶ್ರೀನಿವಾಸ್, ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಕೆ. ಗೋಪಾಲ ಪೂಜಾರಿ, ಪಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ದುಬೈನ ಸಿ‌ಎಂಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಿಶ್ವವಾಣಿ ದಿನಪತ್ರಿಕೆ ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್, ರೆಡಿಸ್ಸನ್ ಬ್ಲೂ ಆರ್ಟಿಯಾ ನಿರ್ದೇಶಕರಾದ ಕೆ. ನಾಗರಾಜ್, ರಾಜಕೀಯ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಬಿ. ವಿನಯ ಕುಮಾರ್ ಶೆಟ್ಟಿ, ಜಯಶೀಲ್ ಎನ್. ಶೆಟ್ಟಿ, ಮನೀಶ್ ಜೆ. ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!