spot_img
Monday, June 23, 2025
spot_img

ರಾಮ ಮೂರ್ತಿಗೆ ಕೃಷ್ಣ ಶಿಲೆ ಕೊಟ್ಟವನಿಗೆ ರೂ.80 ಸಾವಿರ ದಂಡ |  ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ರಾಮಭಕ್ತರ ಮೇಲಿನ ಕೋಪ ಇನ್ನೂ ತಣ್ಣಗಾದಂತಿಲ್ಲ : ಅಶೋಕ್‌ ಕಿಡಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಅಯೋಧ್ಯೆಯ ರಾಮ ಮಂದಿರಕ್ಕಾಗಿ ಕೆತ್ತಲಾದ ‘ಬಾಲಕ ರಾಮ’ನ ‌ಮೂರ್ತಿಗೆ ಬಳಸಿದ ಕೃಷ್ಣಶಿಲೆಯನ್ನು ಒದಗಿಸಿದ ಕಲ್ಲು ಗಣಿಗಾರಿಕೆ ಗುತ್ತಿಗೆದಾರನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರದ ಈ ನಡೆಗೆ ರಾಜ್ಯ ಬಿಜೆಪಿ ಆಕ್ರೋಶ ಹೊರ ಹಾಕಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್ ‌ʼಎಕ್ಸ್ʼ ಖಾತೆಯ ಮೂಲಕ ಕಿಡಿ ಕಾರಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ರಾಮಭಕ್ತರ ಮೇಲಿನ ಕೋಪ ಇನ್ನೂ ತಣ್ಣಗಾದಂತಿಲ್ಲ ಎಂದು ಹೇಳಿದ್ದಾರೆ

ಸಿಎಂ ಸಿದ್ದರಾಮಯ್ಯ ಅವರೇ, ತಾವು ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ಅಂತ ಇನ್ನೊಬ್ಬರ ಭಕ್ತಿ, ಶ್ರದ್ಧೆಗಳ ಮೇಲೆ ದ್ವೇಷ ಸಾಧಿಸುವುದು ಯಾವ ನ್ಯಾಯ? ತಮಗೆ ರಾಮಮಂದಿರಕ್ಕೆ ಕಾಣಿಕೆ ಕೊಡುವ ಮನಸ್ಸಿಲ್ಲದಿದ್ದರೆ ಹೋಗಲಿ, ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿರುವ ಭಕ್ತರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ.

ಮಾತ್ರವಲ್ಲದೇ ಕಾಂಗ್ರೆಸ್ ವಿರುದ್ಧವೂ ಆಕ್ರೋಶ ಹೊರ ಹಾಕಿದ ಅಶೋಕ್, ರಾಮೊತ್ಸವಕ್ಕೆ ಅಡ್ಡಿ, ಕರಸೇವಕರ ಬಂಧನ, ರಾಮನ ಫ್ಲೆಕ್ಸ್ ಹರಿದಿದ್ದು, ರಾಮ ಸೀತೆ ಟೆಂಟ್ ಗೊಂಬೆ, ಜನವರಿ 22ರಂದು ರಜೆ ಕೊಡಲ್ಲ, ರಾಮ ಅವರ ಅಪ್ಪನ ಮನೆ ಆಸ್ತಿನಾ, ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಇವ್ಯಾವುದೂ ಕಾಂಗ್ರೆಸ್ ನಾಯಕರಿಂದ ಬಾಯಿ ತಪ್ಪಿ ಬಂದ ಮಾತುಗಳಲ್ಲ. ಮುಸ್ಲಿಮರ ಓಲೈಕೆಗಾಗಿ ಉದ್ದೇಶಪೂರ್ವಕವಾಗಿ ಆಡಿದ ಮಾತುಗಳು. ಈ ರಾಮ ನಿಂದನೆಯ ನಡೆ-ನುಡಿಗಳೆಲ್ಲ ಕಾಂಗ್ರೆಸ್ ಪಕ್ಷದ ಮನದಾಳದಲ್ಲಿರುವ ಹಿಂದೂ ವಿರೋಧ, ರಾಮದ್ವೇಷದ ಪ್ರತಿಬಿಂಬಗಳಾಗಿವೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!