Sunday, September 8, 2024

ಜ್ಞಾನವಾಪಿ ಮಸೀದಿ ವಿವಾದ : ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ವೈಜ್ಙಾನಿಕ ಸಮೀಕ್ಷೆಯ ವರದಿ ನೀಡಿದ ನ್ಯಾಯಾಲಯ !

ಜನಪ್ರತಿನಿಧಿ ವಾರ್ತೆ(ವಾರಣಾಸಿ) : ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜ್ಙಾನವಾಪಿ ಮಸೀದಿ ಇರುವ ಜಾಗದಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮಾಡಿದ ವೈಜ್ಙಾನಿಕ ಸಮೀಕ್ಷೆಯ ವರದಿಯನ್ನು ವಾರಣಾಸಿ ನ್ಯಾಯಾಲಯ ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ಇಂದು (ಬುಧವಾರ) ನೀಡಿದೆ.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿ, ದೇವಾಲಯ ಮೂಲ ತಳಪಾಯದ ಮೇಲೆ ಹದಿನೇಳನೇ ಶತಮಾನದ ಜ್ಙಾನವಾಪಿ ಮಸೀದುನ್ನು ನಿರ್ಮಿಸಲಾಗಿದೆ ಎಂಬ ಹಿಂದೂ ಪರ ಅರ್ಜಿದಾರರ ವಾದವನ್ನು ಪುರಸ್ಕರಿಸಿದ್ದ ವಾರಣಾಸಿ ನ್ಯಾಯಾಲಯ, ಜಾಗದ ವೈಜ್ಙಾನಿಕ ಸಮೀಕ್ಷೆ ಮಾಡಿ ವರದಿ ನೀಡುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನ್ಯಾಯಾಲಯ ಸೂಚನೆ ನೀಡಿತ್ತು.

ಜ್ಙಾನವಾಪಿ ಮಸೀದಿ ಸಂಕೀರ್ಣದಲ್ಲಿ ಇರುವ ಜಾಗದ ವೈಜ್ಞಾನಿಕ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದಂತೆ ನಡೆಸಿ ವರದಿಯನ್ನು ಡಿ.೧೮ರಂದು ನೀಡಿತ್ತು. ಆದರೇ, ನಾಲ್ಕು ವಾರಗಳ ಕಾಲ ಬಹಿರಂಗ ಪಡಿಸದಂತೆ ಎಎಸ್‌ಐ ನ್ಯಾಯಾಲಯವನ್ನು ಕೋರಿತ್ತು.

ಪ್ರಕರಣದ ಉಭಯ ಪಕ್ಷದವರಿಗೆ ನ್ಯಾಯಾಲಯ ಸಮೀಕ್ಷೆಯ ವರದಿಯನ್ನು ನೀಡಿದೆ. ಮಾತ್ರವಲ್ಲದೇ ವರದುಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸದಂತೆ ನ್ಯಾಯಾಲಯ ಸೂಚನೆ ನೀಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!