Sunday, September 8, 2024

ರಾಜ್ಯದ ಮತ್ತೋರ್ವ ಶಿಲ್ಪಿ ಗಣೇಶ್‌ ಭಟ್‌ ರಾಮ ಮಂದಿರಕ್ಕಾಗಿ ಕೆತ್ತಿದ ಬಾಲರಾಮನ ವಿಗ್ರಹದ ಫೋಟೋ ಬಹಿರಂಗ !

ಜನಪ್ರತಿನಿಧಿ ವಾರ್ತೆ (ಅಯೋಧ್ಯೆ) :  ರಾಜ್ಯದ ಮತ್ತೊಬ್ಬ ಶಿಲ್ಪಿ ಕೆತ್ತಿದ ಬಾಲರಾಮನ ಮೂರ್ತಿಯ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಖ್ಯಾತ ಶಿಲ್ಪಿ ಗಣೇಶ್ ಭಟ್ ನಿರ್ಮಿಸಿದ ಬಾಲ ರಾಮನ ಮೂರ್ತಿಯ ಚಿತ್ರಗಳು ಸಾಮಾಜಿಕ‌ ಜಾಲತಾಣದಲ್ಲಿ ಈಗ ಹರಿದಾಡುತ್ತಿವೆ.

ಮೂವರು ಖ್ಯಾತ ಶಿಲ್ಪಿಗಳಿಗೆ ಶ್ರೀ ರಾಮನ ಮೂರ್ತಿ ಕೆತ್ತನೆಯ ಕಾರ್ಯವನ್ನು ನೀಡಲಾಗಿತ್ತು. ಅಂತಿಮವಾಗಿ ಕರ್ನಾಟಕದ ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿತ್ತು. ಸೋಮವಾರ(ಜ.೨೨) ಅಯೋಧ್ಯೆಯಲ್ಲಿ ಪ್ರಾತಿಷ್ಟಾಪನೆ ಮಾಡಲಾಗಿದೆ.

ನಿನ್ನೆ(ಮಂಗಳವಾರ) ಅಯೋಧ್ಯೆಯ ರಾಮ ಮಂದಿರಕ್ಕಾಗಿ  ರಾಜಸ್ಥಾನದ ಶಿಲ್ಪಿ ಸತ್ಯನಾತಾಯಣ ಪಾಂಡೆ  ಕೆತ್ತಲಾದ ಬಾಲ ರಾಮನ ಮೂರ್ತಿಯ ಚಿತ್ರಗಳು ಬಹಿರಂಗ ಪಡಿಸಲಾಗಿತ್ತು. ಇದೀಗ ಕರ್ನಾಟಕದ ಮತ್ತೋರ್ವ ಶಿಲ್ಪಿ ಗಣೇಶ್‌ ಭಟ್‌ ಕೆತ್ತನೆಯ ಮೂರ್ತಿಯ ಫೋಟೋವನ್ನು ಬಹಿರಂಗಗೊಳಿಸಲಾಗಿದೆ.

ಶಿಲ್ಪಿ ಗಣೇಶ್‌ ಭಟ್‌ ಅವರು ಕೃಷ್ಣ ಶಿಲೆಯಲ್ಲಿ ಬಾಲರಾಮನ ಮೂರ್ತಿಯನ್ನು ಕೆತ್ತಿದ್ದು, ಭಗವಾನ್‌ ಬಾಲರಾಮನ ಮೂರ್ತಿಯ ಪಾದದ ಬಲ ಬದಿಯ ಕೆಳಭಾಗದಲ್ಲಿ ಹನುಮಂತನ ಮೂರ್ತಿ ಹಾಗೂ ಎಡ ಭಾಗದ ಕೆಳಗೆ ಗರುಡ ಮೂರ್ತಿಯನ್ನು ಕೆತ್ತಲಾಗಿದೆ. ಮೂರ್ತಿಯ ಪ್ರಭಾವಳಿಯ ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ.

ಇನ್ನು, ಶಿಲ್ಲಿ ಗಣೇಶ್‌ ಭಟ್‌ ಹಾಗೂ ರಾಜಸ್ಥಾನದ ಶಿಲ್ಲಿ ಸತ್ಯನಾರಾಐಣ ಪಾಂಡೆ ಕೆತ್ತಿದ ಎರಡೂ ಬಾಲರಾಮರ ಮೂರ್ತಿಗಳನ್ನು ಮಂದಿರದಲ್ಲಿ ಇಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!