spot_img
Monday, April 6, 2026
spot_img

ಮೂಗುತಿ ಸುಂದರಿ ಸಾನಿಯಾ ಜೊತೆಗಿನ ಪ್ರತ್ಯೇಕತೆಯ ವದಂತಿಗಳ ನಡುವೆ ಪಾಕ್ ನಟಿಯನ್ನು ಮದುವೆಯಾದ ಮಲಿಕ್‌ !

ಜನಪ್ರತಿನಿಧಿ  ವಾರ್ತೆ (ನವ ದೆಹಲಿ) : ಭಾರತದ ಮಾಜಿ ಟೆನಿಸ್ ಆಟಗಾರ್ತಿಹಾಗೂ ಮೂಗುತಿ ಸುಂದರಿ ಖ್ಯಾತಿಯ ಸಾನಿಯಾ ಮಿರ್ಜಾ ಅವರೊಂದಿಗಿನ ಪ್ರತ್ಯೇಕತೆಯ ವದಂತಿಗಳ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜನಪ್ರಿಯ ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದು (ಶನಿವಾರ,ಜನವರಿ 20) ದಂದು ನಡೆದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಹಂಚಿಕೊಂಡ ಮಲಿಕ್‌, ಮದುವೆ ಕಷ್ಟ. ವಿಚ್ಛೇದನ ಕಷ್ಟ. ನಿಮ್ಮ ನೆಚ್ಚಿದ್ದನ್ನು ಅನ್ನು ಆಯ್ಕೆ ಮಾಡಿ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ. ನಿಮ್ಮ ಹಾರ್ಡ್ ನೆಚ್ಚಿದನ್ನು ಆಯ್ಕೆ ಮಾಡಿ. ಸಾಲದಲ್ಲಿ ಸಿಲುಕುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧರಾಗಿರುವುದು ಕಷ್ಟ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿ. ಸಂವಹನವೂ ಕಷ್ಟ ಅಷ್ಟೇ ಅಲ್ಲದೇ ಸಂವಹನ ಮಾಡದಿರುವುದೂ ಕಷ್ಟ. ಜೀವನ ಎಂದಿಗೂ ಸುಲಭವಲ್ಲ. ಅದೆಒಂದು ಕಠಿಣ ದಾರಿ. ಆದರೆ ನಾವು ನಮ್ಮ ಕಠಿಣತೆಯನ್ನು ಬುದ್ಧಿವಂತಿಕೆಯಿಂದ ಮೀರಬಹುದು ಎಂದು ಬರೆದುಕೊಂಡಿದ್ದಾರೆ.

ಸದ್ಯ, ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನಗೊಂಡಿದ್ದಾರೆ ಎಂಬ ವದಂತಿಗಳ ನಡುವೆ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ.

ಸಾನಿಯಾ ಮಿರ್ಜಾ ಜೊತೆಗಿನ ವಿವಾಹ ವಿಚ್ಛೇದನದ ನಡುವೆ ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ನಲ್ಲಿದ್ದಿದ್ದರು ಎಂದು ವದಂತಿಗಳೂ ಇದ್ದಿತ್ತು. ಶೋಯಬ್ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲು ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಈ ಹಿಂದೆ ಹಂಚಿಕೊಂಡಿದ್ದಾರೆ.

ಸನಾ ಜಾವೇದ್ ಅವರ ಮದುವೆ ಸಮಾರಂಭದ ಫೋಟೋಗಳನ್ನು ಇಂದು(ಶನಿವಾರ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶೋಯೆಬ್ ಮಲಿಕ್ 2010 ರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿವಾಹಕ್ಕೂ ಮೊದಲು ಆಯೇಶಾ ಸಿದ್ದಿಕಿ ಅವರಿಗೆ  ವಿಚ್ಛೇದನ ನೀಡಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!