Sunday, April 28, 2024

ರಾಮಲಲ್ಲನ ವಿಗ್ರಹದ ಫೋಟೋ ಸೋರಿಕೆ : ಸೂಕ್ತ ತನಿಖೆ ನಡೆಸಲು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಒತ್ತಾಯ

ಜನಪ್ರತಿನಿಧಿ ವಾರ್ತೆ (ಅಯೋಧ್ಯೆ) : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಗೂ ಮುನ್ನ ಗರ್ಭಗುಡಿಯಲ್ಲಿ ಇರಿಸಲಾದ ರಾಮಲಲ್ಲಾ ಮೂರ್ತಿಯ ಫೋಟೋ ಸೋರಿಕೆಯಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಲ್ಲಿನ ಅಧಿಕಾರಿಗಳಲ್ಲಿ ಭೀತಿಗೆ ಕಾರಣವಾಗಿದೆ.  

ಈ ಕುರಿತಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಾಗೂ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಮ ಮಂದಿರದೊಳಗೆ ರಾಮನ ನೂತನ ವಿಗ್ರಹ ಇರುವಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ ಮೂರ್ತಿಯ ದೇಹವನ್ನು ಬಟ್ಟೆಯಿಂದ ಮುಚ್ಚಿಡಲಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ಪ್ರಾಣ ಪ್ರತಿಷ್ಠೆಗೂ ಮುನ್ನ ಕಣ್ಣು ತೆರೆಯುವುದಿಲ್ಲ. ಅಂತಹ ಚಿತ್ರ ಕಾಣಿಸುತ್ತಿದ್ದರೆ ಅದನ್ನು ಸೋರಿಕೆ ಮಾಡಿದ್ದು ಯಾರು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಅವರು ಒತ್ತಾಯ ಮಾಡಿದ್ದಾರೆ

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಲೋಕಾರ್ಪಣೆಗೂ ಮುನ್ನ ಶ್ರೀರಾಮ ಜನ್ಮಭೂಮಿ ಗರ್ಭಗುಡಿಯಿಂದ ರಾಮಲಲ್ಲಾ ಮೂರ್ತಿಯ ಫೋಟೋ ಸೋರಿಕೆಯಾದ ನಂತರ ಅಧಿಕಾರಿ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗ ರಾಮಲಲ್ಲಾ ಫೋಟೋವನ್ನು ಸೋರಿಕೆ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗಂಭೀರವಾಗಿ ಪರಿಗಣಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ರಾಮಲಲ್ಲಾ ವಿಗ್ರಹ ಫೋಟೋವನ್ನು ದೇವಾಲಯದ ಸ್ಥಳದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಬಿಡುಗಡೆ ಮಾಡಿರಬಹುದು ಎಂದು ಟ್ರಸ್ಟ್ ಶಂಕಿಸಿದೆ. ರಾಮಲಲ್ಲಾ ಫೋಟೋ ವೈರಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಟ್ರಸ್ಟ್ ಸಿದ್ಧತೆ ನಡೆಸಿದೆ.

ಕರ್ನಾಟಕದ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ 51 ಇಂಚಿನ ನೂತನ ವಿಗ್ರಹವನ್ನು ಮೊನ್ನೆ ಗುರುವಾರ ಮಧ್ಯಾಹ್ನ ರಾಮಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಬುಧವಾರ ರಾತ್ರಿ ಟ್ರಕ್‌ನಲ್ಲಿ ತಂದು ಇಡಲಾಯಿತು.

ಅಂದು ಮಹಾಮಸ್ತಕಾಭಿಷೇಕ ಮಧ್ಯಾಹ್ನ 12.20ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ನಂತರ ಮೋದಿ ಅವರು 7,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ – ಈ ಕಾರ್ಯಕ್ರಮ ದೂರದರ್ಶನ ಕೇಂದ್ರದಿಂದ ನೇರವಾಗಿ ಪ್ರಸಾರವಾಗಲಿದೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!