Sunday, September 8, 2024

ಯಾರೇನೇ ಅನ್ನಲಿ, ನಾನು ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ: ಆಪ್‌ ಸಂಸದ ಹರಿಭಜನ್‌ ಸಿಂಗ್‌  

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಟೀಂ ಇಂಡಿಯಾದ ಮಾಜಿ ಕ್ರಿಕೇಟಿಗ ಹಾಗೂ ಆಮ್‌ ಆದ್ಮಿ ಪಾರ್ಟಿಯ ಸಂಸದ ಹರಿಭಜನ್‌ ಸಿಂಗ್‌ ಅಯೋಧ್ಯೆಯ ಶ್ರೀರಾಮ ಮಂದಿರಲ್ಲಿ ಜನವರಿ ೨೨(ಸೋಮವಾರ) ನಡೆಯಲಿರುವ ಶ್ರೀರಾಮ ಬಾಲ ಮೂರ್ತಿಯ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ನೊಂದಿಗೆ ಮಾತನಾಡಿದ ಹರಿಭಜನ್‌, ರಾಮಲಲ್ಲಾನ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಯಾರು ಪಾಲ್ಗೊಳ್ಳುತ್ತಾರೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ನಾನಂತೂ ಪಾಲ್ಗೊಳ್ಳುತ್ತೇನೆ. ಇದು ನನ್ನ ವೈಯಕ್ತಿಕ ನಿರ್ಧಾರ. ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತದೋ ಇಲ್ಲವೋ ಅದು ಕಾಂಗ್ರೆಸ್‌ಗೆ ಬಿಟ್ಟಿದ್ದು. ನಾನು ದೇವರನ್ನು ನಂಬುತ್ತೇನೆ. ಇದು ನನ್ನ ನಿರ್ಧಾರ. ನಾನು ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಯಾರಿಗಾದರೂ ಸಮಸ್ಯೆಯಾದರೇ ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಜನವರಿ 22 ರ ರಾಮಮಂದಿರ ಲೋಕಾರ್ಪಣೆಗೆ ವಿರೋಧ ಪಕ್ಷಗಳು ಬಹಿಷ್ಕರಿಸಿರುವ ನಡುವೆ ಹರಿಭಜನ್‌ ಸಿಂಗ್ ಅಬರ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿಯು ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಪ್ರಚಾರದ ಅಸ್ತ್ರವಾಗಿ ದೇವಾಲಯದ ಲೋಕಾರ್ಪಣೆಯನ್ನು  ಮಾಡುತ್ತಿದೆ ಎಂದು ಕಾಂಗ್ರೆಸ್‌ ಸೇರಿ ʼಇಂಡಿಯಾʼ ಮೈತ್ರಿಕೂಟದ ಅಂಗ ಪಕ್ಷಗಳು ಹೇಳಿದ್ದವು.

“ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ (ರಾಮನಿಂದ) ಆಶೀರ್ವಾದವನ್ನು ಪಡೆಯಬೇಕು…. ನಾನು ಖಂಡಿತವಾಗಿಯೂ (ರಾಮ ಮಂದಿರ ಉದ್ಘಾಟನೆ) ಆಶೀರ್ವಾದವನ್ನು ಪಡೆಯಲು (ಭಗವಂತನಿಂದ) ಹೋಗುತ್ತಿದ್ದೇನೆ.” ಎಎಪಿ ಸಂಸದ ಸಿಂಗ್ ಹೇಳಿದ್ದಾರೆ.

ಆಮ್‌ ಆಧ್ಮಿ ಪಾರ್ಟಿಯ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನವರಿ 22 ರ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ಹೇಳಿದ್ದರು. ಮಾತ್ರವಲ್ಲದೆ ಇನ್ನೂ ‘ಪ್ರಾಣ ಪ್ರತಿಷ್ಠಾಪನೆಗೆ “ಔಪಚಾರಿಕ ಆಹ್ವಾನ” ಸ್ವೀಕರಿಸಿಲ್ಲ ಎಂದದೂ ಹೇಳಿದ್ದಾರೆ. ಜನವರಿ 22ರ ನಂತರ ಪತ್ನಿ, ಮಕ್ಕಳು ಹಾಗೂ ಪೋಷಕರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!