Sunday, September 8, 2024

ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವೀಡಿಯೋ ಪ್ರಕರಣ : ಆಂದ್ರದಲ್ಲಿ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು !

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) :  ಬಹುಭಾಷ ನಟಿ ರಶ್ಮಿಕಾ ಮಂದಣ್ಣ  ಅವರ ಡೀಪ್‌ ಫೇಕ್‌ ವೀಡಿಯೋ ಗೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಆಂದ್ರ ಪ್ರದೇಶದಲ್ಲಿ ಇಂದು (ಶನಿವಾರ) ಬಂಧಿಸಿದ್ಧಾರೆ.

ಕಳೆದ ನವೆಂಬರ್‌  2023 ರಂದು ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗಿತ್ತು. ವೀಡಿಯೊದಲ್ಲಿ, ಕಪ್ಪು ಬಣ್ಣದ  ವರ್ಕೌಟ್ ಡ್ರೆಸ್‌ನಲ್ಲಿರುವ ಬ್ರಿಟಿಷ್-ಇಂಡಿಯನ್ ಇನ್ಫ್ಲುವೆನ್ಸರ್ ಜರಾ ಪಟೇಲ್ ಅವರ ಮುಖವನ್ನು ಎಡಿಟ್ ಮಾಡುವ ಮೂಲಕ ನಟಿ ರಶ್ಮಿಕಾ ಅವರ ಫೇಸ್‌ನನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಮಾಡಲಾಗಿತ್ತು. ರಶ್ಮಿಕಾ ಮಂದಣ್ಣ ಅವರು ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ವಿಷಾದವನ್ನೂ ವ್ಯಕ್ತಪಡಿಸಿದ್ದರು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು ಕೂಡ.

ರಶ್ಮಿಕಾ ಅವರ ಫೋಟೋ ಡೀಪ್‌ ಫೇಕ್‌ ವೀಡಿಯೋ ಆದ ಬಳಿಕ ದೆಹಲಿ ಪೊಲೀಸರು    ದೆಹಲಿ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 465 (ಫೋರ್ಜರಿ) ಮತ್ತು 469 (ಪ್ರತಿಷ್ಠೆಗೆ ಹಾನಿ) ಮತ್ತು 66 ಸಿ (ಐದೆಂಟಿಟಿ ಥೆಫ್ಟ್) ಮತ್ತು 66 ಇ (ಗೌಪ್ಯತೆ ಉಲ್ಲಂಘನೆ) ಅಡಿಯಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ʼಎಕ್ಸ್‌ʼ ಖಾತೆಯ ಮೂಲಕ ರಶ್ಮಿಕಾ ವಿಷಾದ ವ್ಯಕ್ತ ಪಡಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳಿಗೆ  ಕಟ್ಟುನಿಟ್ಟಾದ ಕ್ರಮ ನೀಡಲು ಕೇಂದ್ರ ಸರ್ಕಾರ ಆದೇಶಿಸಿತು. ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಇಂತಹ ಫೇಕ್‌ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಆದಶಿಸಿತ್ತು. ಮಾತ್ರವಲ್ಲದೇ, ಪೇಕ್‌ ಪೋಸ್ಟ್‌ಗಳನ್ನು ತೆಗೆ೩ದು ಹಾಕದಿದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಡೀಪ್‌ಫೇಕ್ ಎನ್ನುವುದು ಡಿಜಿಟಲ್ ವಿಧಾನವಾಗಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮಾನ ಹಾನಿ ಮಾಡುವುದಕ್ಕೆ ಇಂತಹ ತಂತ್ರಜ್ಙಾನ ಬಳಸಲಾಗುತ್ತದೆ. ಹೆಚ್ಚಾಗಿ ಅಶ್ಲೀಲ ವೀಡಿಯೋಗಳಲ್ಲಿ ಈ ತಂತ್ರಗಳನ್ನು ಬಳಸಲಾಗುತ್ತದೆ. ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಲಾಗಿದ್ದ ಮಹಿಳೆಯರ ಫೋಟೋಗಳನ್ನು ಬಳಸಿಕೊಂಡು ಅಶ್ಲೀಲ ವೀಡಿಯೋಗಳಿಗೆ ಬಳಸಿಕೊಳ್ಳಲಾಗಿತ್ತು ಎಂಬ ಆಘಾತಕಾರಿ ವರದಿಯೊಂದು ಹೊರಬಂದಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವಿಡಿಯೋ ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಎಡಿಟ್ ಮಾಡಿದ ವೀಡಿಯೊದಲ್ಲಿ, ತೆಂಡೂಲ್ಕರ್ ಆನ್‌ಲೈನ್ ಆಟವನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ, ಭವಿಷ್ಯ ನುಡಿಯುವ ಮೂಲಕ ತೆಂಡೂಲ್ಕರ್ ಮಗಳು ಸಾರಾ ದಿನಕ್ಕೆ 1.8 ಲಕ್ಷ ರೂಪಾಯಿ ಗಳಿಸುವ ಉದಾಹರಣೆಯನ್ನು ನೀಡಿದ್ದಾರೆ.‌

ಈ ವಿಡಿಯೋಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!