spot_img
Tuesday, April 14, 2026
spot_img

ರಾಷ್ಟ್ರ ರಾಜಧಾನಿಯನ್ನು ಆವರಿಸಿದ ಮಂಜು, ಸುಮಾರು ಐವತ್ತು ವಿಮಾನಗಳು, ಮೂವತ್ತು ರೈಲುಗಳ ಸಮಯದಲ್ಲಿ ವ್ಯತ್ಯಯ ! ಪರದಾಡಿದ ಪ್ರಯಾಣಿಕರು.

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) :  ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶೀತ ಮಾರುತಗಳ ಅಲೆ ಹೆಚ್ಚಾಗಿದ್ದು, ವಿಪರೀತ ಮಂಜಿನಿಂದ ರಾಜಧಾನಿ ಮುಳುಗಿದೆ ಎಂಬ ಮಾಹಿತಿ ಇದೆ. ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನವು ಸಫ್ದರ್‌ಜಂಗ್‌ನಲ್ಲಿ 4.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದರೆ, ಪಾಲಂನಲ್ಲಿ ತಾಪಮಾನವು 7.2 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಕೆಯೂ ಮಾಹಿತಿ ನೀಡಿದೆ.

ದೆಹಲಿ ಸಂಪೂರ್ಣವಾಗಿ ಮಂಜಿನಿಂದ ಆವೃತವಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಿಂದ ಇತರೆಡೆಗೆ ಹೊರಡುವ ಸುಮಾರು 30 ವಿಮಾನಗಳು ವಿಳಂಬಗೊಂಡರೆ, 17 ಇತರ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಇಂದು ದೆಹಲಿಗೆ ಸುಮಾರು 30 ರೈಲುಗಳು ತಡವಾಗಿ ಆಗಮಿಸುತ್ತಿವೆ ಎಂದೂ ಕೂಡ ವರದಿಯಾಗಿದೆ.

ಏತನ್ಮಧ್ಯೆ, ಮಂಗಳವಾರ ದಟ್ಟವಾದ ಮಂಜು ವಿಮಾನ ಮತ್ತು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದರಿಂದ ದೆಹಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಿರುವ ದೃಶ್ಯಗಳು ಕಂಡು ಬಂದಿವೆ.

ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ಪಂಜಾಬ್‌ನಲ್ಲಿ ಮಂಗಳವಾರದವರೆಗೆ ದಟ್ಟವಾದ ಮಂಜು ಕವಿದ ವಾತಾವರಣ ಇರುತ್ತದೆ ಎಂದು ಸೋಮವಾರ ಹವಾಮಾನ ಇಲಾಖೆಯ ಬೆಳಗಿನ ಬುಲೆಟಿನ್  ಮಾಹಿತಿ ನೀಡಿತ್ತು. ಹೆಚ್ಚುವರಿಯಾಗಿ, ಮಂಗಳವಾರದವರೆಗೆ ಉತ್ತರ ಭಾರತದಾದ್ಯಂತ ಶೀತದಿಂದ ತೀವ್ರತರವಾದ ಚಳಿಯ ಪರಿಸ್ಥಿತಿ ಇರಲಿದೆ ಎಂದು ಮುನ್ಸೂಚನೆ ನೀಡಿತ್ತು.

ರಾಷ್ಟ್ರೀಯ ರಾಜಧಾನಿಯ ಅಧಿಕೃತ ಹವಾಮಾನ ವೀಕ್ಷಣಾಲಯವಾದ ಸಫ್ದರ್‌ಜಂಗ್‌ನಲ್ಲಿ ಕನಿಷ್ಠ ತಾಪಮಾನವು 3.3 ° ಸೆಲ್ಸಿಯಸ್‌ಗೆ ಇಳಿದಿದ್ದರಿಂದ ಜನವರಿ 15 ಈ ಚಳಿಗಾಲದ ವಿಪರೀತ ಚಳಿಯಿಂದ ಕೂಡಿದ್ದ ಸೂರ್ಯೋದಯದ ಕಾಲಮಾನ ಎಂದು ಪರಿಗಣಿಸಲಾಗಿದೆ. ಏತನ್ಮಧ್ಯೆ, ದೆಹಲಿಯ ಮತ್ತೊಂದು ಹವಾಮಾನ ನಿಗಾ ಕೇಂದ್ರವಾದ ಲೋಧಿ ರಸ್ತೆಯಲ್ಲಿ ಕನಿಷ್ಠ ತಾಪಮಾನವು 3.1 ° ಸೆಲ್ಸಿಯಸ್‌ನಷ್ಟು ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!