Sunday, September 8, 2024

ಪಿಎಂ ಜನ್‌ಮನ್‌ ಅಭಿಯಾನ | ಸರ್ಕಾರಿ ಯೋಜನೆಗಳು ನನ್ನ ಅತಿ ಹಿಂದುಳಿದ ಜನಜಾತೀಯ ಸಹೋದರ ಸಹೋದರಿಯರಿಗೆ ತಲುಪಲಿ : ಮೋದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ ತಲುಪಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ, ಸಮಾಜದ ಬಡವರು, ಹಿಂದುಳಿದವರು ಮತ್ತು ವಂಚಿತ ವರ್ಗಗಳ ಸಬಲೀಕರಣವಾಗಬೇಕು ಎಂಬ ನಿಟ್ಟಿನಲ್ಲಿ ಪಿಎಂ ಜನ್‌ಮನ್‌ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜನ್‌ಮನ್‌ ಅಭಿಯಾನವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲರ ಬಳಿ ತಲುಪಲಿ, ಸರ್ಕಾರಿ ಯೋಜನೆಗಳು ನನ್ನ ಅತಿ ಹಿಂದುಳಿದ ಜನಜಾತೀಯ ಸಹೋದರ ಸಹೋದರಿಯರಿಗೆ ತಲುಪಲಿ ಎಂಬುವುದೇ ಪಿಎಂ  ಜನ್‌ಮನ್‌  ಮಹಾ ಅಭಿಯಾದ ಉದ್ದೇಶವಾಗಿದೆ . ಈ ನಿಟ್ಟಿನಲ್ಲಿ ಇಂದು ಗ್ರಾಮೀಣ  ವಸತಿ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಐನೂರ ನಲವತ್ತು ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ನಮ್ಮ ಅತೀ ಹಿಂದುಳಿದ ಬುಡಕಟ್ಟು ಸಮುದಾಯದ ಸಹೋದರ- ಸಹೋದರಿಯರಿಗೆ ಸರ್ಕಾರ ಪ್ರತಿ ಯೋಜನೆಗಳು ಶೀಘ್ರದಲ್ಲಿ ತಲುಪಲಿ ಎಂಬ ನಿಟ್ಟಿನಲ್ಲಿ ಸರ್ಕಾರವು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯೋನ್ಮುಖವಾಗಿದೆ. ದೇಶದ ಯಾರೋಬ್ಬರೂ ಇನ್ನು ಮುಂದೆ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವುದಿಲ್ಲ ಎಂದು ಅವರು ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಎಲ್ಲದಕ್ಕೂ ಮೊದಲು ಬಡವರ ಬಗ್ಗೆ ಚಿಂತಿಸುವ ಸರ್ಕಾರ ಈಗ ನಮ್ಮ ದೇಶದಲ್ಲಿದೆ. ಬಡವರ ಕಷ್ಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರ ಇಂದು ನಮ್ಮ ದೇಶದಲ್ಲಿದೆ. ಯಾರ ಬಳಿ ಏನೂ ಇಲ್ಲವೋ ಅವರ ಕಷ್ಟ ಸುಖಗಳ ಬಗ್ಗೆ ನಾವು ಮೊದಲು ಚಿಂತಿಸುತ್ತೇವೆ ಎಂದಿದ್ದಾರೆ.

ಇನ್ನು, ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರಬಹುದು ಆದರೇ ದೂರದೃಷ್ಟಿ ನಿಜಕ್ಕೂ ಅದ್ಭುತವಾಗಿರುತ್ತದೆ. ನಮ್ಮ ಸರ್ಕಾರ ಯಾವ ರೀತಿಯಲ್ಲಿ ಬುಡಕಟ್ಟು ಸಮುದಾಯದ ಸಂಸ್ಕೃತಿ ಹಾಗೂ ಅವರ ಗೌರವಕ್ಕಾಗಿ ಕೆಲಸ ಮಾಡುತ್ತಿದೆ ಎಂಬುವುದನ್ನು ಅವರು ಅರಿತಿದ್ದಾರೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!