Sunday, September 8, 2024

‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆಯನ್ನು  ಉದ್ಘಾಟಿಸಿದ ಮೋದಿ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಶುಕ್ರವಾರ) ಉದ್ಘಾಟಿಸಿದರು. ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುʼ ಎಂಬ ಹೆಸರಿನ ಸಮುದ್ರ ಸೇತುವೆಯು ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಪ್ರಸ್ತುತ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 15-20 ನಿಮಿಷಗಳಿಗೆ ಕಡಿತಗೊಳಿಸುತ್ತದೆ.

ಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, “ಭಾರತದ ಅಭಿವೃದ್ಧಿಗಾಗಿ ನಾವು ಸಾಗರವನ್ನು ಆರಿಸಿಕೊಳ್ಳುತ್ತೇವೆ ಮತ್ತು ʼಅಲೆಗಳನ್ನು ಹೊಡೆದುರುಳಿಸಬಹುದು ಎಂಬ ನಮ್ಮ ಸಂಕಲ್ಪಕ್ಕೆ ಇದು ಪುರಾವೆಯಾಗಿದೆ” ಎಂದು ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್‌ ನೀಡಿದ್ದಾರೆ.

ಇನ್ನು, ಡಿಸೆಂಬರ್ 2016 ರಲ್ಲಿ ಸೇತುವೆಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. 21.8 ಕಿಮೀ ಉದ್ದದ ಆರು ಪಥದ ಸೇತುವೆಯನ್ನು ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ., ಸಮುದ್ರದ ಮೇಲೆ 16.5 ಕಿಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿಮೀ ಉದ್ದ ಈ ಸೇತು ಕ್ರಮಿಸುತ್ತದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಕಲ್ಪಿಸುವ ಈ ಸೇತುವೆ ಭಾರತದ ಅತಿ ಉದ್ದದ ಸೇತುವೆ ಮತ್ತು ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸುಮಾರು 2 ಗಂಟೆ ತಗಲುತ್ತಿದ್ದ ಮುಂಬೈ ಹಾಗೂ ನವಿ ಮುಂಬೈ ನಡುವಿನ  ಪ್ರಯಾಣದ ಅಂತರವನ್ನು ಕೇವಲ 20 ನಿಮಿಷಗಳಿಗೆ ಕಡಿಮೆಗೊಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!