Sunday, September 8, 2024

ಮಂಗಳೂರು: ಎಸ್ ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿ ತಜ್ಞ ಪ್ರತಿನಿಧಿಗಳ ಸಭೆ

ಮಂಗಳೂರು: 2024-25ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್‍ಸಿಡಿಸಿಸಿ ಬ್ಯಾಂಕಿನಲ್ಲಿ ಜನವರಿ12ನೇ ಶುಕ್ರವಾರ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆಯಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ ಡಾ| ಎಂ.ಎನ್. ರಾಜೇಂದ್ರಕುಮಾರ್ ಅವರು ಮಾತನಾಡಿ ಎಸ್‍ಸಿಡಿಸಿಸಿ ಬ್ಯಾಂಕ್ 2023-24ನೇ ಸಾಲಿಗೆ ಬೆಳೆಸಾಲಗಳ ಗುರಿಯು ರೂ.2,133.00ಕೋಟಿ ಆಗಿದ್ದು, 31-03-2023ರ ಅಂತ್ಯಕ್ಕೆ ಬೆಳೆಸಾಲಗಳ ಹೊರಬಾಕಿ ರೂ.1,674.00ಕೋಟಿ ಆಗಿರುತ್ತದೆ. ಈಗಾಗಲೇ ರೂ.1633.43 ಕೋಟಿ ಬೆಳೆಸಾಲ ನೀಡಿದೆ ಎಂದರು.

ನಬಾರ್ಡ್ ಪುರ್ನಧನ ಸಾಲ ಹಾಗೂ ಎಸ್‍ಸಿಡಿಸಿಸಿ ಬ್ಯಾಂಕಿನ ಸ್ವಂತ ಬಂಡವಾಳದಿಂದ ಕೃಷಿ ಉದ್ದೇಶಕ್ಕಾಗಿ 2022-23ನೇ ಸಾಲಿನಲ್ಲಿಒಟ್ಟು ರೂ.150.20ಕೋಟಿ ಅವಧಿ ಸಾಲವನ್ನು ನೀಡಲಾಗಿದೆ.2023-24ನೇ ಸಾಲಿಗೆ ಈಗಾಗಲೇ ರೂ.82.09ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಕೃಷಿ ಸಾಲವನ್ನು ಬ್ಯಾಂಕ್ ನೀಡಿದೆ ಎಂದು ಸಭೆಯಲ್ಲಿ ಡಾ| ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದರು.

2024-25ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡತಕ್ಕ ಅಲ್ಪಾವಧಿ ಬೆಳೆಸಾಲದ ಮಿತಿಯನ್ನು ಕೃಷಿತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್, ಲೀಡ್ ಬ್ಯಾಂಕ್, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.

ಸಭೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಎಂ.ವಾದಿರಾಜ್ ಶೆಟ್ಟಿ, ಶ್ರೀ ಶಶಿಕುಮಾರ್ ರೈ,  ಎಸ್. ಬಿ.ಜಯರಾಮ ರೈ, ಶ್ರೀ ಕೆ. ಜೈರಾಜ್ ಬಿ. ರೈ, ಅಶೋಕ್‍ಕುಮಾರ್ ಶೆಟ್ಟಿ,  ಮೋನಪ್ಪ ಶೆಟ್ಟಿ ಎಕ್ಕಾರು, ದ.ಕಜಿಲ್ಲಾ ಸಹಕಾರಿಯೂನಿಯನ್‍ನ ಅಧ್ಯಕ್ಷ ಪ್ರಸಾದ್‍ಕೌಶಲ್ ಶೆಟ್ಟಿ, ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ  ಹೆಚ್. ಎನ್. ರಮೇಶ್, ನಬಾರ್ಡ್ ಡಿಡಿಎಂ ಶ್ರೀಮತಿ ಸಂಗೀತಾಕರ್ತಾ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಕೆ. ಗೋಪಾಲಕೃಷ್ಣ ಭಟ್ ಕೆ., ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಶ್ರೀಮತಿ ಸುಮನ ಶಿವರಾಮ, ಕೃಷಿ ಇಲಾಖೆಯಜಂಟಿ ನಿರ್ದೇಶಕ ಕೆಂಪೇಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೇಮ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಹೆಚ್. ಆರ್. ನಾಯಕ್, ಸಹಾಯಕ ನಿರ್ದೇಶಕರಾದ ದರ್ಶನ್‍ಕೆ., ಪಶುಸಂಗೋಪನಾಇಲಾಖೆಯಉಪ ನಿರ್ದೇಶಕ ಡಾ| ಅರುಣ್‍ಕುಮಾರ್ ಶೆಟ್ಟಿ, ವಲಯ ಪಶು ವೈದ್ಯಾಧಿಕಾರಿ ಡಾ| ಗಜೇಂದ್ರಕುಮಾರ್, ಫಿಶ್ ಮಾರ್ಕೆಟಿಂಗ್ ಫೆಡರೇಶನ್‍ನ ಎಂ.ಡಿ. ಶ್ರೀಮತಿ ದರ್ಶನ್‍ಕೆ.ಟಿ., ಕರ್ನಾಟಕ ಬ್ಯಾಂಕಿನ ಅಧಿಕಾರಿ       ಅಜಿತ್‍ಕುಮಾರ್ ಕೆ. ಎ., ಸಹಕಾರ ಸಂಘಗಳ ಸಹಾಯಕ ನಿಬಂಧಕರುಗಳಾದ  ಸುಧೀರ್‍ಕುಮಾರ್, ಶ್ರೀಮತಿ ತ್ರಿವೇಣಿ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!