spot_img
Thursday, April 16, 2026
spot_img

ಮಾಧ್ಯಮ ಕ್ಷೇತ್ರದ ಮೇಲೆ ಕಾರ್ಪೊರೇಟ್ ಹಿಡಿತ ಆತಂಕಕಾರಿ-ವಿಶ್ವಕುಂದಾಪುರ

‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಬಿಡುಗಡೆ
ಉಡುಪಿ: ಪ್ರಸ್ತುತ ಜಾಗತಿಕ ಮಾಧ್ಯಮಕ್ಷೇತ್ರವು ವಾರೆನ್ ಬಫೆಟ್‌ನಿಂದ ಹಿಡಿದು ಗೌತಮ್ ಅದಾನಿ ವರೆಗೆ ಕಾರ್ಪೊರೇಟ್ ಜಗತ್ತಿನ ಹಿಡತಕ್ಕೆ ಸಿಲುಕಿ ನಲುಗುತ್ತಿದೆ. ಹೀಗಾಗಿ ಪತ್ರಕರ್ತರು ಉಸಿರುಗಟ್ಟಿಸುವ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ವಿಶ್ವ ಕುಂದಾಪುರ ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಂಜಿ‌ಎಂ ಕಾಲೇಜ್‌ನ ರವೀಂದ್ರ ಮಂಟಪದಲ್ಲಿ ಜನವರಿ ೭ರ ಭಾನುವಾರ ನಡೆದ ‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ನಡೆದ ‘ಗಡಿನಾಡು-ಹೊರನಾಡು ಪತ್ರಿಕೆಗಳು’ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ಬಹುತ್ವದ ಮೇಲೆ ದಾಳಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡುವಲ್ಲಿ ಪತ್ರಿಕೆಗಳ ಸಹಿತ ಮಾಧ್ಯಮದ ಪಾತ್ರ ಮಹತ್ವದ್ದು ಎಂದರು.

ದಲಿತ, ಕಮ್ಯೂನಿಸ್ಟ್, ರೈತ-ಕಾರ್ಮಿಕ ಚಳವಳಿ ಸಹಿತ ಜಿಲ್ಲೆಯ ಜನಾಂದೋಲನಗಳಲ್ಲಿ ಏಕೀಕೃತ ಕೋಲಾರದ ಜಿಲ್ಲಾ ಮಟ್ಟದ ಪತ್ರಿಕೆಗಳ ಪಾತ್ರವನ್ನು ವಿಶ್ವ ಕುಂದಾಪುರ ವಿವರಿಸಿದರು.

ಮುದ್ದಣನ ಕಾಲದಿಂದ…
ಮುದ್ದಣನ ಕಾಲದ 1870ರಿಂದ ಹಿಡಿದು 2020ರವರೆಗಿನ ಒಂದುವರೆ ಶತಮಾನದ ಅವಧಿಯ ಉಡುಪಿ ಜಿಲ್ಲಾ ಬರಹಗಾರರ ಮಾಹಿತಿಯನ್ನು ಕೋಶ ಒಳಗೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಸುಬ್ಬಣ್ಣರೈ ಕೃತಿ ಬಿಡುಗಡೆ ಮಾಡಿದರು. ಎಂಜಿ‌ಎಂ ಕಾಲೇಜ್ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್, ಪ್ರಕಾಶಕರಾದ ಬೆಂಗಳೂರಿನ ಬಾಲಾಜಿ ಪಬ್ಲಿಷರ್ಸ್‌ನ ಉದಯ್ ಶೆಟ್ಟಿ ಮೊದಲಾದವರು ಮಾತನಾಡಿದರು. ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಗಣಕತಜ್ಞ ಕೆ.ಪಿ. ರಾವ್ ಸಮಾರೋಪ ಭಾಷಣ ಮಾಡಿದರು. ಕೋಶದ ಸಂಪಾದಕ ಡಾ. ಅನಿಲ್ ಕುಮಾರ್-ಪತ್ನಿ ಮಲ್ಲಿಕಾ ದಂಪತಿಯನ್ನು ಸನ್ಮಾನಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!