Sunday, September 8, 2024

ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ: ಐವತ್ತರ ಸಂಭ್ರಮದಲ್ಲಿ ‘ಯಕ್ಷ ಸಪ್ತೋತ್ಸವ-2024’

ಕೋಟ: ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದಲ್ಲಿ ಹಿರಿಯರ ನೆನಪಾಗಿ “ಯಕ್ಷ ಸಪ್ತೋತ್ಸವ 2024’’ ಕಾರ್ಯಕ್ರಮ ಜ.1ರಿಂದ 7ರ ತನಕ ಗುಂಡ್ಮಿ – ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.

ಜ.1ರಂದು ಉದ್ಘಾಟನೆಗೊಂಡ ಈ ‘ಯಕ್ಷ ಸಪ್ತೋತ್ಸವ-2024’ ಜ.2ರಂದು ‘ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಸ್ಮರಣ’ಯೊಂದಿಗೆ ಕಾರ್ಯಕ್ರಮದಲ್ಲಿ“ಯಕ್ಷಗಾನದಲ್ಲಿ ಪಾತ್ರಧಾರಿಗಳ ಜವಾಬ್ದಾರಿ’ ವಿಷಯದ ಕುರಿತು ಯಕ್ಷಗಾನ ವಿಮರ್ಶಕ ನಿತ್ಯಾನಂದ ಹೆಗಡೆ ಮುರೂರು ಉಪನ್ಯಾಸ ನೀಡಲಿದ್ದಾರೆ. ಕೊನೆಗೆ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಕಲಾವಿದರ ಕೂಡುವಿಕೆಯಲ್ಲಿ ‘ಸೀತಾ ಕಲ್ಯಾಣ ಪರಶುರಾಮ ಗರ್ವಭಂಗ’ ಯಕ್ಷಗಾನ ನಡೆಯಲಿದೆ.

ಡಿ.3ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ‘ಯಕ್ಷಗಾನ ಮತ್ತು ಶಿಕ್ಷಣ’ ವಿಷಯದಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ.ತುಕಾರಾಮ ಪೂಜಾರಿ ಉಪನ್ಯಾಸ ನೀಡಲಿದ್ದಾರೆ. ಕೊನೆಗೆ ‘ಪಟ್ಟಾಭಿಷೇಕ ಭಂಗ’ ಯಕ್ಷಗನನಡೆಯಲಿದೆ.

ಜ.4ರಂದು ಗೋಪಾಲಕೃಷ್ಣ ನಾಯಿರಿಯವರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ಎಲ್.ಸಾಮಗ “ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರ ಪಾತ್ರ’ದಕುರಿತು ಮಾತನಾಡಲಿದ್ದಾರೆ. ಕೊನೆಗೆ ‘ಸೀತಾಪಹಾರ’ ಯಕ್ಷಗಾನ ನಡೆಲಿದೆ.

ಜ.5ರಂದು ಭಾಗವತ ಕಾಳಿಂಗ ನಾವಡ ನೆನಪಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ‘ಸಮಾಜದ ಸಂಸ್ಕøತಿ ಹಾಗು ಸಂಸ್ಕಾರದ ಬೆಳವಣಿಗೆಯಲ್ಲಿ ’ಯಕ್ಷಗಾನದಕೊಡುಗೆ ವಿಷಯದಲ್ಲಿ ಪ್ರಾಧ್ಯಾಪಕ ಡಾ.ರಾಘವೇಂದ್ರರಾವ್‍ ಉಪನ್ಯಾಸ ನೀಡಲಿದ್ದಾರೆ. ಕೊನೆಗೆ “ವಿಭೀಷಣ ನೀತಿ -ಕೈಕಸಾ ನೀತಿ’’ಯಕ್ಷಗಾನ ನಡೆಯಲಿದೆ.

ಜ.6ರಂದು ಕೇಂದ್ರದ ಸಂಸ್ಥಾಪಕ ಐರೋಡಿ ಸದಾನಂದ ಹೆಬ್ಬಾರ್ ಸ್ಮರಣೆಯೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಲೇಖಕ ರಾಧಾಕೃಷ್ಣ ಕಲ್ಚಾರ್‍ ಅವರು“ಕಲಾವಿದರು ಮತ್ತು ಅಧ್ಯಯನ ಶೀಲತೆ’ ಕುರಿತು ಉಪನ್ಯಾಸ ನಡೆಯಲಿದೆ. ಕೊನೆಗೆ ‘ರಾವಣ ವಧೆ’ ಯಕ್ಷಗಾನ ನಡೆಯಲಿದೆ. ಕಲಾಕೇಂದ್ರದ ಆಧ್ಯಕ್ಷ ಅನಂದಸಿ. ಕುಂದರ್‍ ಎಲ್ಲಾ ಕಾರ್ಯಕ್ರಮಗಳ ಆಧ್ಯಕ್ಷತೆ ವಹಿಸಲಿದ್ದಾರೆ.

ಜ. 7ರಂದು ಸಂಜೆ ಸಮಾರೋಪ ಜರಗಲಿದ್ದು ಶಾಸಕ ಕಿರಣ್‍ಕುಮಾರ್‍ ಕೊಡ್ಗಿ ಹಾಗು ಇತರರು ಭಾಗವಹಿಸಲಿದ್ದಾರೆ. ಕೊನೆಯಲ್ಲಿ ದೊಂದಿ ಬೆಳಕಿನ ಯಕ್ಷಗಾನ “ಅಗ್ನಿ ಪರೀಕ್ಷೆ-ರಾಮ ಪಟ್ಟಾಭಿಷೇಕ’ ನಡೆಯಲಿದೆ ಎಂದು ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!