spot_img
Saturday, April 18, 2026
spot_img

ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ : ಆರ್‌ ಅಶೋಕ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅಶೋಕ್, ರಾಮಮಂದಿರ ಉದ್ಘಾಟನೆಯಾಗುತ್ತಿದೆ. ರಾಮಜನ್ಮ ಭೂಮಿ ಹೋರಾಟದಲ್ಲಿ ನಾನೂ ಭಾಗಿಯಾಗಿದ್ದೆ. ಹುಬ್ಬಳ್ಳಿಯಲ್ಲಿ ರಾಮಮಂದಿರ ಹೋರಾಟದಲ್ಲಿ ಭಾಗಿಯಾದವರನ್ನು ಪೊಲೀಸರು ಬಂಧಿಸಿದ್ದಾರೆ.ಇಬ್ಬರು ಕಾರ್ಯಕರ್ತರನ್ನ ಬಂಧಿಸಿದ್ದಾರೆ ಎಂದರು.

ರಾಮಭಕ್ತರ ಮೇಲೆ, ರಾಮ ಅನುಯಾಯಿಗಳ ಮೇಲೆ ಕೇಸ್ ಹಾಕಿದ್ದಾರೆ. ಮೂವತ್ತು ವರ್ಷದ ಹಿಂದೆ ಹೋರಾಟ ಮಾಡಿದವರನ್ನು ಬಂಧಿಸಿದ್ದಾರೆ. ನಾನು, ಯಡಿಯೂರಪ್ಪನವರು ಕೂಡ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದೇವು. ಹಾಗಾದ್ರೆ ನಮ್ಮನ್ನು ಅರೆಸ್ಟ್ ಮಾಡುತ್ತಾರಾ..? ಎಂದು ಪ್ರಶ್ನಿಸಿದ್ದಾರೆ.
ಮೂವತ್ತು ವರ್ಷದ ಹಿಂದೆ ಆಗಿರುವ ಘಟನೆ ಕೇಸ್ ಗೆ ಮರು ಜೀವ ಕೊಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು, ನಾವು ರಾಮ ಭಕ್ತರು ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ, ರಾಮನವಮಿಯನ್ನು ಯಾವತ್ತೂ ಆಚರಣೆ ಮಾಡಿಲ್ಲ. ಟಿಪ್ಪು ಜಯಂತಿಯನ್ನ ರಾಜ್ಯಾಧ್ಯಂತ ಸಂಭ್ರಮ ಮಾಡುತ್ತಾರೆ. ರಾಮ ,ಕೃಷ್ಣ ಅಂದ್ರೆ ಇವರಿಗೆ ಆಗಲ್ಲ. ಕೇಸರಿ ಶಾಲು,ಕುಂಕುಮ ಹಾಕಿದ್ರೆ ಅವರಿಗೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಪಸಂಖ್ಯಾತರ ಕಾಲೋನಿ ಮಾತ್ರ ಅಭಿವೃದ್ಧಿಯಾಗಬೇಕು ಅನುತ್ತಾರೆ. ಬಹುಸಂಖ್ಯಾತರು ಇರುವ ಕಾಲೋನಿ ಅಭಿವೃದ್ಧಿ ಆಗಬಾರದು ಇವರಿಗೆ. ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳು‌ವ ನೀತಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್, ನಾವು ಕೂಡ ಹಿಂದುಗಳೇ. ಬಿಜೆಪಿ ಅವರಷ್ಟೇ ಹಿಂದುಗಳಲ್ಲ, ಅಯೋಧ್ಯೆಗೆ ಹೋಗಬೇಕೋ ಬೇಡವೋ ಎನ್ನುವುದದನ್ನ ಹೈ ಕಮಾಂಡ್ ತೀರ್ಮಾನ ಮಾಡಲಿದೆ. ರಾಮರಾಜ್ಯ ಅನ್ನೋದು ಎಲ್ಲರಿಗೂ ಇದೆ ಬಿಜೆಪಿಗಷ್ಟೇ ಅಲ್ಲ ಎಂದಿದ್ದರು. ಇಂಡಿಯಾ ಒಕ್ಕೂಟ ರಾಮ ಮಂದಿರ ಉದ್ಘಾಟನೆಗೆ ಹೋಗಬಾರದು ಅನ್ನೋದರ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!