spot_img
Saturday, April 18, 2026
spot_img

ಮರಗಳನ್ನು ಕಡಿದು ಸಾಗಿಸಲು ಜೆಸಿಬಿ, ಹಿಟಾಚಿಗಳನ್ನು ಕಳಿಸಿದ್ದು ನಿಮ್ಮ ತಮ್ಮನೇ ಅಲ್ಲವೇ? : ಪ್ರತಾಪ್‌ ಸಿಂಹಗೆ ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಪ್ರತಾಪ್‌ ಸಿಂಹ ಅವರೇ, ತಮ್ಮ ಪ್ರತಾಪ ಬ್ಯಾರಿಕೆಡ್ ಹಾರುವುದರಲ್ಲಿ ಅಷ್ಟೇ ಅಲ್ಲ, ವಾಸ್ತವಿಕ ಪ್ರಶ್ನೆಗಳಿಗೆ ವಿಷಯಾಂತರ ಮಾಡದೆ ನೇರವಾಗಿ ಉತ್ತರಿಸುವುದರಲ್ಲೂ ನಿಮ್ಮ ಪ್ರತಾಪ ತೋರಿಸಿ ಎಂದು ರಾಜ್ಯ ಕಾಂಗ್ರೆಸ್‌ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮನನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಆರೋಪಿಸಿದ್ದ ಪ್ರತಾಪ್‌ ಸಿಂಹ ಅವರಿಗೆ ಪುಂಖಾನುಪುಂಖವಾಗಿ ಪ್ರಶ್ನೆ ಮಾಡಿದ ಕಾಂಗ್ರೆಸ್‌,  ನಿಮ್ಮ ಸಹೋದರ ಜಮೀನು ಗುತ್ತಿಗೆ ಪಡೆದಿದ್ದು ನಿಜವಲ್ಲವೇ? ನಿಜಕ್ಕೂ ಶುಂಠಿ ಬೆಳೆಯಲು ಗುತ್ತಿಗೆ ಪಡೆದಿದ್ದೋ ಅಥವಾ ಅಲ್ಲಿದ್ದ ಬೆಲೆಬಾಳುವ ಮರಗಳನ್ನು ಲಪಟಾಯಿಸಲು ಗುತ್ತಿಗೆ ಪಡೆದಿದ್ದೋ? ಎಂದು ಕೇಳಿದೆ.

ಮಾತ್ರವಲ್ಲದೇ,  ಮರಗಳನ್ನು ಕಡಿದು ಸಾಗಿಸಲು ಜೆಸಿಬಿ, ಹಿಟಾಚಿಗಳನ್ನು ಕಳಿಸಿದ್ದು ನಿಮ್ಮ ತಮ್ಮನೇ ಅಲ್ಲವೇ? ಅರಣ್ಯ ಭೂಮಿಯಾಗಲಿ, ಖಾಸಗಿ ಭೂಮಿಯಾಗಲಿ ಅನುಮತಿ ಪಡೆಯದೆ ಮರಗಳನ್ನು ಕಡಿಯುವುದು ಕಾನೂನು ಉಲ್ಲಂಘನೆ ಎಂಬ ಸಾಮಾನ್ಯ ಅರಿವು ಇರಲಿಲ್ಲವೇ? ಕಾನೂನು ಉಲ್ಲಂಘಿಸಿದ್ದರೂ ಪ್ರತಾಪ್ ಸಿಂಹನ ತಮ್ಮ ಎಂದು ಸುಮ್ಮನಿರಬೇಕಿತ್ತೆ? ಎಂದೂ ಪ್ರಶ್ನಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!