spot_img
Friday, April 24, 2026
spot_img

ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತ ತೆಕ್ಕಟ್ಟೆ ರಮೇಶ್ ನಾಯಕ್‌ರಿಗೆ ಅಭಿನಂದನೆ

ಕುಂದಾಪುರ: ಯಾವ ವಿಷಯವನ್ನು ಯಾರು ಬಲ್ಲರು? ಎಂಬುದನ್ನು ಅರಿತು ಕೇಳಿದರೆ ಪ್ರತಿಫಲ ದೊರಕಿಯೇ ದೊರಕುತ್ತದೆ ಎಂಬುದನ್ನು ಸಾಧಕ ಕೃಷಿಕರಾಗಿ ತೆಕ್ಕಟ್ಟೆ ರಮೇಶ್ ನಾಯಕ್ ತೋರಿಸಿಕೊಟ್ಟಿದ್ದಾರೆ. ಸಂಗೀತ ಕ್ಷೇತ್ರವಾದರೆ ಸಂಗೀತದ ಪಾಂಡಿತ್ಯವಿರುವವರಲ್ಲಿ ಮಾತ್ರ ಕಲಿಯಬೇಕು. ಭರತನಾಟ್ಯವನ್ನೂ ಕೂಡ ಓರ್ವ ಗುರುವನ್ನು ಆಯ್ಕೆ ಮಾಡಿಕೊಂಡು ಅವರಲ್ಲಿಯೇ ನಿರಂತರ ಕಲಿಯಬೇಕು. ಮಾಹಿತಿಯನ್ನು ಬಲ್ಲವರಿಂದಲೇ ಪಡೆದು ಕೃಷಿಕರಾಗಿ ರಾಷ್ಟ್ರ ಮಟ್ಟದಲ್ಲಿ ಗೆದ್ದಿದ್ದಾರೆ. ಕೇಂದ್ರದಿಂದ ಕೊಡಮಾಡುವ ಬಿಲಿಯನೇರ್ ರೈತ ಪ್ರಶಸ್ತಿ ಪಡೆಯುವುದು ಸಣ್ಣ ವಿಷಯವಲ್ಲ. ಆ ನಿಟ್ಟಿನಲ್ಲಿ ಜಿಲ್ಲೆಗೇ ಮಾದರಿಯಾಗಿ ತೆಕ್ಕಟ್ಟೆಯಲ್ಲಿ ಕೃಷಿ ಕ್ಷೇತ್ರದಿಂದ ಮಾನ್ಯವಾದವರು ರಮೇಶ್ ನಾಯಕ್ ಎಂದು ಹಲ್ಸನಾಡು ಡಾ. ರಾಮ್ ಮೋಹನ್ ಅಭಿನಂದನಾ ಮಾತುಗಳನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಡಿಸೆಂಬರ್ 17ರಂದು ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್ ಮಣೂರು ಜಂಟಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಾರ್ಪಣ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಉದ್ಯಮಿ ರಮೇಶ್ ನಾಯಕ್ ತೆಕ್ಕಟ್ಟೆ ಇವರನ್ನು ಅಭಿನಂದಿಸಿ ಡಾ. ರಾಮ್ ಮೋಹನ್ ಮಾತನ್ನಾಡಿದರು.

ಯಾವುದನ್ನಾದರೂ ಕೂಲಂಕುಶವಾಗಿ ನೋಡಬೇಕು, ಮತ್ತೆ ನಂಬಬೇಕು. ಸಾಧನೆ ಮಾಡುವ ಮನಸ್ಸುಳ್ಳವರು ಸತತವಾದ ಅಧ್ಯಯನ, ನಿರಂತರ ಪರಿಶ್ರಮ, ನವೀನತೆಯ ಪರಿಕಲ್ಪನೆ ಇರಿಸಿಕೊಳ್ಳಬೇಕಾಗುತ್ತದೆ. ಈ ಮೂರು ವಿಷಯವನ್ನು ಅನುಕರಿಸಿದರೆ ಯಾರೂ ಯಾವ ಕ್ಷೇತ್ರದಲ್ಲಿಯೂ ಸಾಧಿಸಬಹುದು ಎಂದು ಅಭಿನಂದನೆಯನ್ನು ಸಲ್ಲಿಸಿಕೊಂಡ ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತ ರಮೇಶ್ ನಾಯಕ್ ತೆಕ್ಕಟ್ಟೆ ಮಾತನ್ನಾಡಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಿವೃತ್ತ ಅಧ್ಯಾಪಕ ಶಿವಾನಂದ ಮೈಯ್ಯ, ಭರತನಾಟ್ಯ ಗುರು ಅಮೃತಾ ಉಪಾಧ್ಯ, ಕರಾಟೆ ಗುರು ವಿ ಸುಂದರಂ, ಸರಸ್ವತಿ ಲಲಿತ ಕಲಾ ಟ್ರಸ್ಟ್ ನ ಕೇಂದ್ರದ ಸಂಗೀತ ಗುರು ಶಾರದಾ ಹೊಳ್ಳ, ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.

ಪವನ್ ಆಚಾರ್ ಸ್ವಾಗತಿಸಿ, ಕಿಶನ್ ಪೂಜಾರಿ ವಂದಿಸಿ, ಶ್ರೀಮತಿ ಸುಮನಾ ನೇರಂಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಾರ್ಪಣ ಕಾರ್ಯಕ್ರಮವಾಗಿ ಸಂಗೀತ ಕಾರ್ಯಕ್ರಮ, ಕರಾಟೆ ಷೋ, ಭರತನಾಟ್ಯ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!