spot_img
Sunday, April 26, 2026
spot_img

ಬಿಜೆಪಿ, RSS ಗರ್ಭಗುಡಿಯಲ್ಲಿ ದಲಿತರಿಗೆ ಸ್ಥಾನಮಾನ ನೀಡಿ ನಂತರ ನಮ್ಮಲ್ಲಿ ಸಮಾನತೆ ಇದೆ ಎಂಬುದನ್ನು ಹೇಳಲಿ : ಕಾಂಗ್ರೆಸ್‌ ಒತ್ತಾಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಮಾಜಿ ಸಚಿವ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದರು. ಆದರೇ, ಆರ್‌ಎಸ್‌ಎಸ್‌ ಈ ಆರೋಪವನ್ನು ಅಲ್ಲಗಳೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಗೂಳಿಹಟ್ಟಿಉ ಶೇಖರ್‌, ಹೆಡಗೇವಾರ್‌ ಸ್ಮಾರಕಕ್ಕೆ ನನ್ನನ್ನು ಪ್ರವೇಶಿಸಲು ಬಿಟ್ಟಿರುವ ಸಿಸಿಟಿವಿ ಫೂಟೇಜಗ ಬಿಡುಗಡೆ ಮಾಡಿ ಎಂದು ಸವಾಲು ಹಾಕಿರುವ ಪತ್ರಿಕೊಂದರ ತುಣಕನ್ನು ಉಲ್ಲೇಖಿಸಿ ಮತ್ತೆ ಕಾಂಗ್ರೆಸ್‌ ಬಿಜೆಪಿಯನ್ನು ತಿವಿದಿದೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌, ಹೆಡಗೇವಾರ್ ಸ್ಮಾರಕಕ್ಕೆ ನನ್ನನ್ನು ಒಳಗೆ ಬಿಟ್ಟಿದ್ದಿದ್ದರೆ, ಅದರ ಸಿಸಿ ಟಿವಿ ಫೂಟೇಜ್ ಬಿಡುಗಡೆ ಮಾಡಲಿ ಎಂದು ಗೂಳಿಹಟ್ಟಿ ಶೇಖರ್ ಬಿಜೆಪಿಗೆ ಸವಾಲು ಹಾಕಿದ್ದಾರೆ.  ಬಿಜೆಪಿ ಈ ಸವಾಲನ್ನು ಸ್ವೀಕರಿಸುವ ನೈತಿಕತೆಯನ್ನು ತೋರಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ಹಾಗೂ RSS ಗರ್ಭಗುಡಿಯಲ್ಲಿ ದಲಿತರಿಗೆ ಸ್ಥಾನಮಾನ ನೀಡಿ ನಂತರ ನಮ್ಮಲ್ಲಿ ಸಮಾನತೆ ಇದೆ ಎಂಬುದನ್ನು ಹೇಳಲಿ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!