Sunday, September 8, 2024

ವೈವಾಹಿಕ ಜೀವನದಲ್ಲಿ ದೈಹಿಕ ಸಂಪರ್ಕಕ್ಕೆ ಪತ್ನಿಯನ್ನು ಬಲವಂತಗೊಳಿಸುವುದು ಅಪರಾಧವಲ್ಲ : ಅಲಹಾಬಾದ್ ಹೈಕೋರ್ಟ್ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ ( ಅಲಹಾಬಾದ್)‌ : ವೈವಾಹಿಕ ಸಂಬಂಧದಲ್ಲಿ ದೈಹಿಕ ಸಂಪರ್ಕಕ್ಕೆ ಬಲವಂತಗೊಳಿಸುವುದನ್ನು ಕ್ರಿಮಿನಲ್‌ ಎಂದು ಪರಿಗಣಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವುದರಿಂದ, ಪತ್ನಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾಗ ಮದುವೆ ಆದಮೇಲಿನ ಜೀವನದಲ್ಲಿ ಬಲವಂತದ ದೈಹಿಕ ಸಂಪರ್ಕ ಯಾವುದೇ ಕ್ರಿಮಿನಲ್ ದಂಡವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಪತ್ನಿ 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ    ವೈವಾಹಿಕ ಬಲವಂತವನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಅವನ ಹೆಂಡತಿಯ ಮೇಲೆ ‘ಅಸ್ವಾಭಾವಿಕ ಅಪರಾಧ’ (unnatural offence) ಮಾಡಿದ ಆರೋಪದಿಂದ ಪತಿಯನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ತೀರ್ಪನ್ನು ಹೇಳಿದೆ.

ಈ ಪ್ರಕರಣದ ಆರೋಪಿಗಳಿಗೆ ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರಿದ್ದ ನ್ಯಾಯಪೀಠವು ಈ ದೇಶದಲ್ಲಿ ವೈವಾಹಿಕ ಅತ್ಯಾಚಾರವನ್ನು ಇನ್ನೂ ಅಪರಾಧವೆಂದು ಪರಿಗಣಿಸಲಾಗಿಲ್ಲ ಎಂದು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್‌ಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವುದರಿಂದ, ಪತ್ನಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾಗ ವೈವಾಹಿಕ ಅತ್ಯಾಚಾರಕ್ಕೆ ಯಾವುದೇ ಕ್ರಿಮಿನಲ್ ದಂಡವಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಹಿಂದೊಮ್ಮೆ ನ್ಯಾಯ ಪೀಠವು ಇಂತಹದ್ದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ಅನುಮೋದಿಸಿದ ಅಲಹಾಬಾದ್ ಹೈಕೋರ್ಟ್, ವೈವಾಹಿಕ ಸಂಬಂಧದಲ್ಲಿ ಯಾವುದೇ ‘ಅಸ್ವಾಭಾವಿಕ ಅಪರಾಧ’ (ಐಪಿಸಿ 377 ರ ಪ್ರಕಾರ) ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ತನ್ನ ಮನವಿಯಲ್ಲಿ, ದೂರುದಾರರು ತಮ್ಮ ವಿವಾಹವು ಒಂದು ನಿಂದನೀಯ ಸಂಬಂಧವಾಗಿದೆ ಎಂದು ಆರೋಪಿಸಿದ್ದಾರೆ ಮತ್ತು ಪತಿಯು ತನ್ನನ್ನು ದೈಹಿಕವಾಗಿ ಪೀಡಿಸುವುದಲ್ಲದೇ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿದ್ದಾರೆ ಎಂದು ವರದಿ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!