spot_img
Sunday, April 26, 2026
spot_img

ರಾಹುಲ್‌ ಅವರ ಭಾರತ್‌ ಜೋಡೋ ಯಾತ್ರೆ ದೇಶದಲ್ಲಿನ ಕಳ್ಳರನ್ನು ಸಂಪರ್ಕಿಸಿದ ಯಾತ್ರೆ : ಅಮಿತ್‌ ಮಾಳವಿಯಾ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇಂದು(ಶನಿವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷವನ್ನು ಟೀಕಿಸಿದ್ದು, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ʼXʼ ನಲ್ಲಿ ರಾಹುಲ್‌ ಹಾಗೂ ಕಾಂಗ್ರೆಸ್‌ನ್ನು ಟೀಕಿಸಿದ ಅವರು, ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರೊಂದಿಗೆ ರಾಹುಲ್ ಗಾಂಧಿಯನ್ನು ಇಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

” ರಾಹುಲ್‌ ಅವರ ಭಾರತ್‌ ಜೋಡೋ ಯಾತ್ರೆ ದೇಶದಲ್ಲಿನ ಕಳ್ಳರನ್ನು ಸಂಪರ್ಕಿಸಿದ ಯಾತ್ರೆ. ಕಾಂಗ್ರೆಸ್ #CorruptionKiDukan. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಸಂಬಂಧಪಟ್ಟ ಸ್ಥಳದಲ್ಲಿ ಸುಮಾರು 300 ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದು ಇದಕ್ಕೆ ಜೀವಂತ ಪುರಾವೆಯಾಗಿದೆ” ಎಂದು ಅವರು ಹೇಳಿದ್ದಾರೆ (ಸಾಮಾಜಿಕ ಜಾಲತಾಣ ʼXʼ ನಲ್ಲಿ ಹಿಂದಿಯಲ್ಲಿರುವ ಮಾಳವಿಯಾ ಅವರ  ಪೋಸ್ಟ್‌ನನ್ನು ಕನ್ನಡಕ್ಕೆ ಸೂಕ್ತವಾಗಿ ಅನುವಾದವನ್ನು ಮಾಡಲಾಗಿದೆ).

ಅಮಿತ್‌ ಮಾಳವಿಯಾ ಅವರ ಪೋಸ್ಟ್‌ ಇರುವ ಲಿಂಕ್‌ : https://x.com/amitmalviya/status/1733375419150192963?t=AkCOhNyJauLeHf2rvZVWuA&s=08

ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧ ಪಟ್ಟ ಜಾರ್ಖಂಡ್ ಮತ್ತು ಒಡಿಶಾದಲ್ಲಿ ಇರುವ ಸ್ಥಳದಲ್ಲಿ  ಆದಾಯ ತೆರಿಗೆ ದಾಳಿ ನಡೆಸಿದ್ದು, 200 ಕೋಟಿಗೂ ಹೆಚ್ಚು ಅಕ್ರಮ ನಗದು ಪತ್ತೆಯಾಗಿತ್ತು. (ಬುಧವಾರದಿಂದ (ಡಿಸೆಂಬರ್ 6) ಆದಾಯ ತೆರಿಗೆ ದಾಳಿ ನಡೆಸುತ್ತಿದೆ)

ಮತ್ತೊಂದು ಪೋಸ್ಟ್‌ನಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಉಲ್ಲೇಖಿಸಿದ ಅಮಿತ್ ಮಾಳವಿಯಾ, “ಇಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನ ಮತ್ತು ಇಂದು #CorruptionKiDukan ಮಾಲೀಕರ ಜನ್ಮದಿನವೂ ಹೌದು. ಇದು ಕಾಕತಾಳೀಯ!” (ಸೋನಿಯಾ ಗಾಂಧಿ ಡಿಸೆಂಬರ್ 9 ರಂದು ತಮ್ಮ ಜನ್ಮದಿನವನ್ನು ಆಚರಿಸುತ್ತಾರೆ). ಎಂದು ಬರೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!