spot_img
Sunday, April 26, 2026
spot_img

ಗೂಳಿಹಟ್ಟಿ ಆಡಿಯೋ ವೈರಲ್‌ : ಈ ಮೌನದ ಅರ್ಥ ಅಸ್ಪೃಶ್ಯತೆ ಆಚರಣೆ ಬಿಜೆಪಿ, RSSನ ಜನ್ಮಸಿದ್ದ ಹಕ್ಕು ಎನ್ನುವುದೇ? : ಕಾಂಗ್ರೆಸ್‌

ಜನಪ್ರತಿನಿಧಿ ವಾರ್ತೆ( ಬೆಂಗಳೂರು) : ಸಂಘ ಪರಿವಾರದಲ್ಲಿ ಅಸ್ಪೃಶ್ಯತೆ ಆಚರಣೆ ಇದೆಯೇ ಇಲ್ಲವೇ ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಹೊಸದುರ್ಗ ಮಾಜಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಪ್ರಶ್ನೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ಗೂಳಿಹಟ್ಟಿ ಶೇಖರ್, ಬಿಜೆಪಿಯ ಮಾಜಿ ಸಚಿವ, ಮಾಜಿ ಶಾಸಕ. ಜನಪ್ರತಿನಿಧಿಯಾಗಿದ್ದ ಬಿಜೆಪಿ ಪಕ್ಷದವರೇ ನಾಗಪುರದ RSS ಕಚೇರಿಯಲ್ಲಿ ಅಸ್ಪೃಶ್ಯತೆ ಎದುರಿಸಿದೆ ಎಂದು ಹೇಳಿದ್ದಾರೆ. RSSನ ಮುದ್ದಿನ ಕೂಸು ಬಿ.ಎಲ್‌. ಸಂತೋಷ್ ಅವರ ಬಳಿ ತಮಗಾದ ನೋವು, ಅವಮಾನದ ಬಗ್ಗೆ ಅವಲತ್ತುಕೊಂಡರೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

ಇನ್ನು, ಈ ಮೌನದ ಅರ್ಥ ಅಸ್ಪೃಶ್ಯತೆ ಆಚರಣೆ ಬಿಜೆಪಿ, RSSನ ಜನ್ಮಸಿದ್ದ ಹಕ್ಕು ಎನ್ನುವುದೇ? ಎಂದು ಪ್ರಶ್ನಿಸಿದೆ.

“ನಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬುದು ಖಚಿತವಾಗಿದ್ದರಿಂದ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬಲ್ಲಿರಾ” ಎಂದು ವೈರಲ್‌ ಆದ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಬಿ.ಎಲ್‌ ಸಂತೋಷ್‌ ಅವರನ್ನು ಪ್ರಶ್ನಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!