spot_img
Wednesday, January 22, 2025
spot_img

ಸಿದ್ದರಾಮಯ್ಯರ ಕೈ ಕಟ್ಟಿ ಹಾಕಿದ್ದರೆ, ಸಹಿ ಹೇಗೆ ಹಾಕುತ್ತಾರೆ ? : ಸಚಿವ ಮಹದೇವಪ್ಪ

ಜನಪ್ರತಿನಿಧಿ ವಾರ್ತೆ : ಯಾವ ಕಾಲಕ್ಕೂ ಮುಖ್ಯಮಂತ್ರಿ ಕುರ್ಚಿ ಖಾಲಿ ಆಗುವುದೇ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಇರಬಹುದು. ಅದು ತಪ್ಪು ಎಂದು ನಾನು ಹೇಳುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಹೇಳಿದರು.

ಮಾಧ್ಯಮಗಳ ವರದಿಗಾರರಿಗೆ ಸ್ಪಂದಿಸಿದ ಅವರು, ಸದ್ಯ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಯಾಕೆ ಉದ್ಭವವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಇನ್ನು, ಸಿದ್ದರಾಮಯ್ಯ ಅವರಿಗೆ ಮೊದಲಿದ್ದ ಸ್ವಾತಂತ್ರ್ಯ ಈಗ ಇದ್ದಂತಿಲ್ಲ, ೨೦೧೩ ಸುವರ್ಣಯುಗವಾಗಿತ್ತು ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಯಾಕಿಲ್ಲ..? ಅವರು ಎಂದಿಗೂ ಸ್ವಾತಂತ್ರ್ಯದಿಂದಲೇ ಇರುವ ವ್ಯಕ್ತಿ. ಸ್ವಾತಂತ್ರ್ಯ ಕಳೆದುಕೊಂಡು ಅವರು ಎಂದಿಗೂ ಆಡಳಿತ ನಡೆಸುವುದಿಲ್ಲ. ಅವರ ಕೈ ಕಟ್ಟಿ ಹಾಕಿದ್ದರೆ, ಸಹಿ ಹೇಗೆ ಹಾಕುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಎಲ್ಲಾ ಅಧಿಕಾರದ ಅವಧಿಯೂ ದೀನ, ದಲಿತರು, ಜನ ಸಾಮಾನ್ಯರಿಗೆ ಸುವರ್ಣಯುಗವೇ, ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚೆಚ್ಚು ಇತ್ತಮವಾದ ಕಾರ್ಯಕ್ರಮಗಳನ್ನು, ಯೋಜನೆಗಳು ಇರುತ್ತವೆ. ಆದರೇ, ಆಂಜನೇಯ ಅದು ಯಾವ ಅರ್ಥದಲ್ಲಿ ಸ್ವಾತಂತ್ರ್ಯ ಇಲ್ಲ ಅಂತ ಹೇಳಿದ್ದಾರೋ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!