Sunday, September 8, 2024

ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ ಸೌಹಾರ್ದ ಸಂಭ್ರಮ -2023 ಉದ್ಘಾಟನೆ

ಸಾಸ್ತಾನ: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಬಹು ಮುಖ್ಯವಾಗಿರುತ್ತದೆ. ಈ ಹಂತದಲ್ಲಿ ಕ್ರೀಡಾ ಸ್ಪೂರ್ತಿ ಅತೀ ಮುಖ್ಯವಾಗಿರುತ್ತದೆ ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಹಂಗಾರಕಟ್ಟೆ ‘ಚೇತನಾ ಪ್ರೌಢ ಶಾಲಾ ಕ್ರೀಡಾಂಗಣ’ ದಲ್ಲಿ‌ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿ ಆಶ್ರಯದಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ ‘ಸೌಹಾರ್ದ ಸಂಭ್ರಮ-2023″ ಉದ್ಘಾಟಿಸಿ ಮಾತನಾಡಿದರು.

ವರ್ಷವಿಡೀ ವ್ಯವಹಾರದ ತೊಡಸಿಕೊಂಡ ಸಹಕಾರಿಗಳಿಗೆ ಕ್ರೀಡಾಕೂಟ ಚೈತನ್ಯದಾಯಕವಾಗಲಿ ಎಂದರು.
ಶಾಸಕ, ಮೀನುಗಾರಿಕೆ ಫೆಡರೇಶನ್‌ಅಧ್ಯಕ್ಷಯಶ್‌ಪಾಲ್ ಸುವರ್ಣ ಮಾತನಾಡಿ, ಕ್ರೀಡೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ. ಜತೆಗೆ‌ಒಗ್ಗಟ್ಟು, ದೇಶದ ಆರ್ಥಿಕತೆಗೆ ಸಹಕಾರಿ ಕೊಡುಗೆ ಅನನ್ಯ. ಜಿಲ್ಲೆಯ ಸಹಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪ್ರತಿಭೆಗಳಿಗೆ ಅವಕಾಶ ನೀಡಿ ಆರೋಗ್ಯಪೂರ್ಣ ವಾತಾವರಣವನ್ನು ಕಲ್ಪಿಸಿರುವ ಸೌಹಾರ್ದ ಸಹಕಾರಿ ಒಕ್ಕೂಟ ಅಭಿನಂದಾರ್ಹ‌ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ‌ಎಸ್.ಕೆ. ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ನಿರ್ದೇಶಕಿ ಭಾರತಿ ಜಿ.ಭಟ್, ಶಾಸಕ ಗುರುರಾಜ್ ಗಂಟಿಹೊಳೆ, ಎಸ್.ಸಿಡಿಸಿಸಿ ನಿರ್ದೇಶಕ ರಾಜು ಪೂಜಾರಿ, ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್., ಕ್ರೀಡಾಕೂಟ ಸಂಚಾಲಕ ಅಶೋಕ್ ಪ್ರಭು ಸಾಬ್ರಕಟ್ಟೆ ಮೊದಲಾದವರಿದ್ದರು.
ಸೌಹಾರ್ದ ಸಹಕಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಸ್ವಾಗತಿಸಿ, ವಿಜಯ್ ಬಿ.ಎಸ್. ವಂದಿಸಿದರು. ಸತೀಶ್ಚಂದ್ರ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

ಕಾಪು, ಉಡುಪಿ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ಕುಂದಾಪುರ ಈ ತಾಲೂಕುಗಳನ್ನು 7 ವಲಯಗಳನ್ನಾಗಿ ರಚಿಸಲಾಗಿತ್ತು. ಸಹಕಾರಿಯ ಆಡಳಿತ ಮಂಡಳಿ, ಸಿಬಂದಿ, ಸಿಬಂದಿಯೇತರರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ಸೌಹಾರ್ದ ಸಹಕಾರಿಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದರು. ಸಹಕಾರಿ ಸಾಧಕರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ನೆರವೇರಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!