spot_img
Sunday, April 26, 2026
spot_img

ಮೋದಿ ಜನರ ಬೆನ್ನಿಗೆ ಚೂರಿ ಹಾಕುವುದಕ್ಕೆ ಒಂದು ದಿನವೂ ವಿಳಂಬ ಮಾಡುವುದಿಲ್ಲ : ಕಾಂಗ್ರೆಸ್‌ ಟೀಕೆ

ಜನಪ್ರತಿನಿಧಿ ವಾರ್ತೆ : ಇತ್ತೀಚೆಗಷ್ಟೆ ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪೂರ್ಣ ಗೊಂಡಿದ್ದು, ಇದರ ಬೆನ್ನಿಗೆ ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ ಮತತ್ತೆ ಏಇಕೆ ಕಂಡಿದೆ. ಹತ್ತೊಂಬತ್ತು ಕೆಜಿ ಎಲ್‌ಪಿಜಿ ಸಿಲಿಂಡರ್‌ವೊಂದಕ್ಕೆ  ಇಪ್ಪತ್ತೊಂದು ರೂ. ಹೆಚ್ಚಳ ಮಾಡಲಾಗಿದೆ.

ಈ ವಿಚಾರವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೂರಿದೆ.

ತನ್ನ, ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ, ಮೋದಿ ಎಂಬ ಸುಣ್ಣವನ್ನು ಬೆಣ್ಣೆ ಎಂದು ನಂಬಿಸಲು ನಾನಾ ಕಸರತ್ತು ನಡೆಸುತ್ತದೆ ಬಿಜೆಪಿ. ಚುನಾವಣೆ ಸಂದರ್ಭದಲ್ಲಿ ಬೆಣ್ಣೆ ರೂಪದಲ್ಲಿರುವ ಮೋದಿ ಚುನಾವಣೆಯ ನಂತರ ಸುಣ್ಣವೆಂಬ ಅಸಲಿ ರೂಪದ ದರ್ಶನವಾಗುತ್ತದೆ ಎಂದು ಹೇಳಿದೆ.

ಇನ್ನು,  ಪಂಚರಾಜ್ಯಗಳ ಚುನಾವಣೆಗಾಗಿ ಇಳಿಕೆಯಾಗಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಚುನಾವಣೆ ಮುಗಿದ ಮರುದಿನವೇ ಏರಿಕೆಯಾಗಿದೆ. ನರೇಂದ್ರ ಮೋದಿ ಅವರು ಜನರ ಬೆನ್ನಿಗೆ ಚೂರಿ ಹಾಕುವುದಕ್ಕೆ ಒಂದು ದಿನವೂ ವಿಳಂಬ ಮಾಡುವುದಿಲ್ಲ ಎಂದು ಟೀಕೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!