Sunday, September 8, 2024

ಕುಂದಾಪುರ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ

ಕುಂದಾಪುರ: 453 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 29 ರಂದು ”ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾ‌ಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ “ನಾವು ವಿಶ್ವಾಸವುಳ್ಳ ಯಾತ್ರಿಕರು, ಮೇರಿ ಮಾತೆಯ ಆದರ್ಶತೆಯಲ್ಲಿ ಜೀವಿಸುವರಾಗಿದ್ದೇವೆ, ನಾವು ಆಡುವ ಮಾತುಗಳಿಗಿಂತ ನಾವು ಜೀವಿಸುವ ರೀತಿ ಪಾವನವಾಗುತ್ತೆ, ನಮ್ಮ ಹಿಂದಿನ ಪೋಪ್ ಸ್ವಾಮಿಗಳಾದ ಪೋಪ್ ಸ್ವಾಮಿ ಜೋನ್ ಪಾವ್ಲ್ ಎರಡನೇಯವರು ಮೇರಿ ಮಾತೆಯ ಮೇಲೆ ಅಪಾರ ಭಕ್ತಿ ವಿಶ್ವಾಸದಿಂದ ಜೀವಿಸಿದರು, ಮುಂದೆ ಅವರು ಧರ್ಮಗುರುಗಳಾಗಿ, ಬಿಶಪರಾಗಿ, ಕಾರ್ಡಿನಲ್ ಆಗಿ ಕೊನೆಗೆ ಕ್ರೈಸ್ತ ಧರ್ಮದಲ್ಲಿನ ಅತ್ಯುನ್ನತ್ತವಾದ ಪೋಪ್ ಸ್ಥಾನವನ್ನು ಪಡೆದುಕೊಂಡರು. ಮೇರಿ ಮಾತೆಗೆ ನಾವು ವಿವಿಧ ನಾಮಗಳಲ್ಲಿ ಕರೆಯುತ್ತೇವೆ, ಕುಂದಾಪುರದಲ್ಲಿ ರೋಜರಿ ಮಾತೆಯ ನಾಮದಲ್ಲಿ ಸಮರ್ಪಿಸಲ್ಪಟ್ಟ ಇಗರ್ಜಿ ಬಹಳ ಪುರಾತನವಾದುದು, ಇದು ತುಂಬ ಸುಪ್ರಸಿದ್ದಿ ಪಡೆದಿದೆ, ನಾವು ಕೂಡ ರೊಜರಿ ಮಾತೆಯ ಮೇಲೆ ಭರವಸೆ ಇಟ್ಟು ಅವಳ ನೆರಳಲ್ಲಿ ಉತ್ತಮ ಜೀವನ ಜೀವಿಸೊಣ, ನಮಗೆ ಕ್ರೈಸ್ತರಿಗೆ ಯೇಸು ದೇವರೆ ಭರವಶೆ, ಅವರು ನಡೆದ ಕಷ್ಟ ಕಾರ್ಪಣ್ಯದ ದಾರಿಯಲ್ಲಿ, ಅವರು ಹೊತ್ತ್ಸ್ ಶಿಲುಬೆ, ಶಿಲುಬೆಯ ಮೇಲೆ ಅವರು ಪಡೆದ ಜಯ ನಮಗೆ ಪ್ರೇರಣೆಯಾಗಲಿ, ಈ ವರ್ಷ ಯೇಸು ಕ್ರಿಸ್ತರ ೨೦೨೫ ರ ಜಯಂತಿಯಾಗಿದ್ದು, ಅವರ ಭೋದನೆಯಂತೆ ಜೀವಿಸಿ ನಮ್ಮ ಜೀವವನ್ನು ಪಾವನಗೊಳಿಸೋಣ’ ಎಂದು ಅವರು ಸಂದೇಶ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ|ವಂ|ಸ್ಟ್ಯಾನಿ ಬಿ.ಲೋಬೊ ಬಲಿದಾನದಲ್ಲಿ ಭಾಗಿಯಾದರು. ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯ ಮತ್ತು ಧನ್ಯವಾದಗಳನ್ನು ಅರ್ಪಿಸಿದರು, ಕಂಡ್ಲೂರು ಚರ್ಚಿನ ಧರ್ಮಗುರು ವಂ| ಕೆನ್ಯೂಟ್ ಬಾರ್ಬೊಜಾ ಶುಭಾಶಯದ ನುಡಿಗಳನ್ನಾಡಿದರು.

ಕುಂದಾಪುರದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆಯ ಹಾಗೂ ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!