Sunday, September 8, 2024

ಬ್ರಹ್ಮಾವರ: ಜಿ ಎಮ್‌ನಲ್ಲಿ ಅಲುಮ್ನಿ ಡೆ-ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಅಲುಮ್ನಿ ಡೆ ಯನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಸಕಲೇಶಪುರದ ತೆಂಕಲಗೂಡು ಬೃಹನ್ಮಠದ ಶಬ್ಧಬ್ರಹ್ಮ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಆಶೀರ್ವಚನವನ್ನು ನೀಡಿ ಮಾತನಾಡಿ ಯಾರು ನಿಸ್ವಾರ್ಥ ಸೇವಾ ಮನೋಭಾವದಿಂದ ಕೆಲಸವನ್ನು ಮಾಡುತ್ತಾರೋ ಅವರನ್ನು ಸಮಾಜ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಭಾರತ ವಿಶ್ವಗುರು ಎಂದು ಕರೆಸಿಕೊಂಡದ್ದು ಇದೇ ಕಾರಣಕ್ಕೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಇಡೀ ಜಗತ್ತಿಗೆ ಆದರ್ಶವಾದದ್ದು ಎಂದರು.

ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಜಿ ಎಮ್‌ನ ಹಳೆ ವಿದ್ಯಾರ್ಥಿ ಸಂಘ ಪ್ರತಿವರ್ಷ ನೂತನ ರೆಂಬೆ, ಕೊಂಬೆಗಳನ್ನು ಸೇರಿಸಿಕೊಂಡು ಭದ್ರವಾಗಿ ಬೇರೂರಿ ಇನ್ನಷ್ಟು ಫಲ ಪುಷ್ಪಗಳನ್ನು ನೀಡಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು. ಅಲುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಚಿರಂತ್ ಬಿ ಶೆಟ್ಟಿ ವಾರ್ಷಿಕ ವರದಿ ವಾಚನವನ್ನು ಮಾಡಿ ಮಾತನಾಡಿ ಹಳೆ ವಿದ್ಯಾರ್ಥಿಗಳು ಕೇವಲ ಸಂಪರ್ಕದಲ್ಲಿ ಇದ್ದರೆ ಸಾಲದು. ಕಲಿತ ಶಾಲೆಗೆ ಕೀರ್ತಿ ತರುವಂತಹ ಕೆಲಸಗಳನ್ನು ಮಾಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ, ಸ್ಥಾನ ಮಾನ ಪಡೆದು ಜೀವನದ ಸಾಧನೆಯ ಮೆಟ್ಟಿಲನ್ನೇರಿ ಸಾರ್ಥಕತೆಯ ಭಾವದೊಂದಿಗೆ ಬಂದಿರುವುದು ನನಗೆ ಅಪಾರ ಸಂತಸವನ್ನು ನೀಡಿದೆ ಎಂದರು. ೨೦೨೨-೨೩ನೇ ಸಾಲಿನ ಹತ್ತನೇ ತರಗತಿಯಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲೆಯ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಘದ ವತಿಯಿಂದ ವಿತರಿಸಲಾಯಿತು. ನಂತರ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ ಎಮ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸರ್ವ ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ತಾನ್ಯ ಶೆಟ್ಟಿ, ಹರ್ಷ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು, ವಿಶ್ವಜಿತ್ ಅಡಿಗ ಸ್ವಾಗತಿಸಿ, ಆದರ್ಶ್ ಆಚಾರ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!