spot_img
Monday, April 27, 2026
spot_img

ವಕೀಲರಿಗೆ ಉಪನ್ಯಾಸ ಮಾಡಿದವರ ಕ್ಯಾಬಿನೇಟ್‌ನಲ್ಲಿ ಇಂತಹ ತೀರ್ಮಾನ ಮಾಡಿರುವುದು ಬೇಸರ : ಕುಮಾರಸ್ವಾಮಿ  

ಜನಪ್ರತಿನಿಧಿ ವಾರ್ತೆ :  ಆದಾಯ ಮೀರಿದ ಆಸ್ತಿ ಗಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ  ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ವಿರುದ್ದ ಸಿಬಿಐ ತನಿಖೆಗೆ ಅನುಮತಿ ನೀಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸಚಿವ ಸಂಪುಟ ವಾಪಾಸ್‌ ಪಡೆಯಲು ತೀರ್ಮಾನ ಮಾಡಿದೆ.

ಪಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ. ಕುಮಾರಸ್ವಾಮಿ ಮಾಧ್ಯಮ ವರದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಯಾವುದಾದರೂ ಉತ್ತಮವಾದ ಕೆಲಸಕ್ಕಾಗಿ ಸಚಿವ ಸಂಪುಟ ಈ ರೀತಿಯ ತೀರ್ಮಾನ ಮಾಡಿದ್ದಿ ಹಾದಾಗಿದ್ದರೇ ಒಪ್ಪಬಹುದಾಗಿತ್ತು. ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಒಪ್ಪುವಂತದಲ್ಲ. ಹಿಂದೆ ಇದ್ದಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕೆ ಸಿಬಿಐ ಅನುಮತಿನ್ನು ಕೋರಿತ್ತು. ಅಂದಿನ ಸರ್ಕಾರ ಅನುಮತಿಯನ್ನು ಕೊಟ್ಟಿದ್ದರು. ಕಾನೂನು ಬಾಹೀರವಾಗಿ ಈಗಿನ ಉಪಮುಖ್ಯಮಂತ್ರಿಗಳು ಸಂಪಾದನೆ ಮಡಿರುವುದರ ಬಗ್ಗೆ ನಾನು ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಕೋರ್ಟ್‌ನಲ್ಲಿ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಸಿದ್ದರಾಮಯ್ಯ ಅವರು ವಕೀಲ ವೃತ್ತಿ ಮಾಡುವವರಿಗೆ ಉಪನ್ಯಾಸ ಮಾಡಿದ ಉಪನ್ಯಾಸಕರು.  ಅವರಿಗೆ ಕಾನೂನಿನಲ್ಲಿ ಏನೇನಾಗುತ್ತದೆ ಎಂದು ಗೊತ್ತಿಲ್ಲವೆ ಎಂದು ಅವರು ಪ್ರಶ್ನಿಸಿದ್ದಲ್ಲದೇ, ಅವರ (ಸಿದ್ದರಾಮಯ್ಯ) ಕ್ಯಾಬಿನೆಟ್‌ ನಲ್ಲಿ ಇಂತಹದ್ದೊಂದು ತೀರ್ಮಾನ ಮಾಡಿರುವುದು ಬೇಸರ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!